ಜಹೀರ್ ಖಾನ್ ಅನುಪಸ್ಥಿತಿಯಲ್ಲಿ ನಾಯಕನಾಗಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನ ಮುನ್ನಡೆಸಿದ ಕನ್ನಡಿಗ ಕರುಣ್ ನಾಯರ್ ಮೊದಲ ಯತ್ನದಲ್ಲೇ ಮುಗ್ಗರಿಸಿದ್ದಾರೆ. ಪಂಜಾಬ್ ವಿರುದ್ಧ ಡೆಲ್ಲಿ ತಂಡ 10 ವಿಕೆಟ್`ಗಳ ಹೀನಾಯ ಸೋಲು ಕಂಡಿದೆ.
ಟಾಸ್ ಗೆದ್ದರೂ ಪಂಜಾಬ್ ಕ್ಯಾಪ್ಟನ್ ಗ್ಲೇನ್ ಮ್ಯಾಕ್ಸ್ ವೆಲ್ ಡೆಲ್ಲಿಗೆ ಬ್ಯಾಟಿಂಗ್ ಅವಕಾಶ ಕೊಟ್ಟರು. ನಾಯಕನ ನಿರ್ಣಯವನ್ನ ಸಮರ್ಥಿಸಿದಂತೆ ಬೌಲ್ ಮಾಡಿದ ಪ್ರೀತಿ ಹುಡುಗರು ಕೇವಲ 67 ರನ್`ಗಳಿಗೆ ಡೆಲ್ಲಿ ತಂಡವನ್ನ ಕಟ್ಟಿಹಾಕಿದ್ದರು. 8 ಬ್ಯಾಟ್ಸ್`ಮನ್`ಗಳು ಎರಡಂಕಿ ದಾಟದೇ ಔಟಾಗಿದ್ದು ತಂಡಕ್ಕೆ ದುಬಾರಿಯಾಯ್ತು. ಸಂಜು ಸ್ಯಾಮ್ಸನ್, ನಾಯರ್, ಅಯ್ಯರ್, ಪಂತ್, ಬಿಲ್ಲಿಂಗ್ಸ್ ಯಾರೊಬ್ಬರೂ ಪಂಜಾಬ್ ದಾಳಿ ಎದುರು ನಿಲ್ಲಲು ಸಾಧ್ಯವಾಗಲಿಲ್ಲ. 14 ರನ್`ಗೆ 4 ವಿಕೆಟ್ ಉರುಳಿಸಿದ ಸಂದೀಪ್ ಶರ್ಮಾ ಡೆಲ್ಲಿ ಬ್ಯಾಟಿಂಗ್ ಪಡೆಗೆ ಮುಳುವಾದರು. ಅತ್ಯುತ್ತಮ ಸಾಥ್ ನೀಡಿದ ಅಕ್ಷರ್ ಪಟೇಲ್, ವರುಣ್ ಆರೋನ್ ತಲಾ 2 ವಿಕೆಟ್ ಪಡೆದರು.
ಕೇವಲ 68 ರನ್ ಗುರಿ ಬೆನ್ನತ್ತಿದ್ದ ಪಂಜಾಬ್7.5 ಓವರ್`ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ ಗೆಲುವಿನ ಗುರಿ ತಲುಪಿತು. ಈ ಸೋಲಿನಿಂದ ಡೆಲ್ಲಿಯ ಪ್ಲೇ ಆಫ್ಸ್ ಹಾದಿ ಕಠಿಣವಾಗಿದ್ದು, ಉಳಿದೆಲ್ಲ ಪಂದ್ಯಗಳನ್ನ ಗೆಲ್ಲೇಬೇಕಾಗಿದೆ. ಪಂದ್ಯದ ಬಳಿಕ ಮಾತನಾಡಿದ ಕೊಚ್ ರಾಹುಲ್ ದ್ರಾವಿಡ್ ಟೂರ್ನಿ ಆರಂಭದಿಂದಲೂ ತಮಡ ಎದುರಿಸಿದ ಗಾಯಾಳು ಸಮಸ್ಯೆ ಬಗ್ಗೆ ಪರಿಪೂರ್ಣ ತಂಡದೊಂದಿಗೆ ಕಣಕ್ಕಿಳಿಯಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ