Publish Date: Sun, 30 Apr 2017 (07:48 IST)
Updated Date: Sun, 30 Apr 2017 (07:50 IST)
ನವದೆಹಲಿ: ಐಪಿಎಲ್ ನಲ್ಲಿ ಇದೀಗ ವಿರಾಟ್ ಕೊಹ್ಲಿಗಿಂತಲೂ, ಧೋನಿಗಿಂತಲೂ ಹೆಚ್ಚು ಸದ್ದು ಮಾಡುತ್ತಿರುವ ಆಟಗಾರ ಗೌತಮ್ ಗಂಭೀರ್. ಕೋಲ್ಕೊತ್ತಾ ನೈಟ್ ರೈಡರ್ಸ್ ನಾಯಕನ ಪರ ಅಭಿಮಾನಿಗಳು ಅಭಿಯಾನವನ್ನೇ ಶುರು ಮಾಡಿದ್ದಾರೆ.
ಮತ್ತೆ ಗಂಭೀರ್ ರನ್ನು ಟೀಂ ಇಂಡಿಯಾಕ್ಕೆ ಕರೆಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ. #ಬ್ರಿಂಗ್ ಬ್ಯಾಕ್ ಜಿಜಿ ಎಂಬ ಅಭಯಾನ ಟ್ವಿಟರ್ ನಲ್ಲಿ ಹರಿದಾಡುತ್ತಿದೆ.
ಗಂಭೀರ್ ಈ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಸಂಪಾದಿಸಿರುವುದಷ್ಟೇ ಅಲ್ಲ, ಅಭಿಮಾನಿಗಳ ಹೃದಯವನ್ನೂ ಗೆದ್ದಿದ್ದಾರೆ. ತಮ್ಮ ತಂಡವನ್ನು ಅಗ್ರ ಸ್ಥಾನಕ್ಕೆ ಕೊಂಡೊಯ್ದಿರುವ ಗಂಭೀರ್ ಉತ್ತಮ ನಾಯಕ ಎಂದೂ ಹೊಗಳಿಸಿಕೊಂಡಿದ್ದಾರೆ.
ಅದೂ ಸಾಲದೆಂಬಂತೆ, ಸುಕ್ಮಾ ದಾಳಿಗೊಳಗಾದ ಯೋಧರ ಮಕ್ಕಳ ನೆರವಿಗೆ ಬರುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೀಗಾಗಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತೋ ಬಿಡುತ್ತೋ, ಬೇರೆ ಟೂರ್ನಿಗಾದರೂ ಸರಿಯೇ, ಒಂದು ಕಾಲದಲ್ಲಿ ಭಾರತ ತಂಡದ ಖಾಯಂ ಓಪನರ್ ಆಗಿದ್ದ ಗಂಭೀರ್ ರನ್ನು ಮರಳಿ ಕರೆ ತನ್ನಿ ಎಂದು ಅಭಿಮಾನಿಗಳು ಮೊರೆಯಿಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ