Select Your Language

Notifications

webdunia
webdunia
webdunia
webdunia

‘ಜನರಿಗೆ ಐಪಿಎಲ್ ಗಿಂತ ಪಾಕ್ ಕ್ರಿಕೆಟ್ ಲೀಗ್ ಇಷ್ಟ’

‘ಜನರಿಗೆ ಐಪಿಎಲ್ ಗಿಂತ ಪಾಕ್ ಕ್ರಿಕೆಟ್ ಲೀಗ್ ಇಷ್ಟ’
Karachi , ಸೋಮವಾರ, 3 ಏಪ್ರಿಲ್ 2017 (08:11 IST)
ಕರಾಚಿ: ವೀಕ್ಷಕರಿಗೆ ಭಾರತದ ಐಪಿಎಲ್ ಗಿಂತ ಪಾಕಿಸ್ತಾನದ ಪಿಎಸ್ಎಲ್ ಎಂದರೆ ತುಂಬಾ ಇಷ್ಟ ಎಂದು ಪಾಕಿಸ್ತಾನ ಕ್ರಿಕೆಟಿಗ ಮಿಸ್ಬಾ ಉಲ್ ಹಕ್ ಹೇಳಿಕೊಂಡಿದ್ದಾರೆ.


 
‘ಪಿಎಸ್ಎಲ್ ಬಗ್ಗೆ ಜನಕ್ಕೆ ಎರಡೇ ವರ್ಷದಲ್ಲಿ ಆಸಕ್ತಿ ಹೆಚ್ಚಿದೆ. ನೋಡ್ತಾ ಇರಿ.. ಇನ್ನು ಜಾಹೀರಾತುದಾರರು, ಹೂಡಿಕೆದಾರರು ನಮ್ಮ ಕ್ರಿಕೆಟ್ ಲೀಗ್ ಗೆ ಹರಿದು ಬರಲಿದ್ದಾರೆ. ಆದರೆ ಐಪಿಎಲ್ ಬಗ್ಗೆ ಜನಕ್ಕೆ ಈಗ ಆಸಕ್ತಿ ಕಡಿಮೆಯಾಗಿದೆ’ ಎಂದು ಮಿಸ್ಬಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 
ಇದೇ ವೇಳೆ ಮಿಸ್ಬಾ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಸದೇ ಇರುವ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ವೈಷಮ್ಯಗಳು ಒಂದು ಕ್ರೀಡೆಗೆ ಅಡ್ಡಿಯಾಗಬಾರದು. ಇದರಿಂದ ಅನ್ಯಾಯವಾಗುತ್ತಿರುವುದು ಅಭಿಮಾನಿಗಳಿಗೆ ಎಂದಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಒಲಿಪಿಂಕ್ಸ್ ಸೋಲಿನ ಸೇಡು ತೀರಿಸಿಕೊಂಡ ಪಿ.ವಿ. ಸಿಂಧು ಈಗ ವರ್ಲ್ಡ್ ಚಾಂಪಿಯನ್