ರಷ್ಯಾ: ರಷ್ಯಾದ ಕಂಪನಿಯೊಂದು ''ಫೆಮಿನಿಟಿ ಮ್ಯಾರಥಾನ್'' ಎಂಬ ಕ್ಯಾಂಪೇನ್ ಮಾಡುತ್ತಿದ್ದು, ಆ ಮೂಲಕ ಕೆಲಸಕ್ಕೆ ಮಿನಿ ಸ್ಕರ್ಟ್ ಹಾಗೂ ಡ್ರೆಸ್‌ಗಳನ್ನು ಹಾಕಿಕೊಂಡು ಬರುವ ಮಹಿಳಾ ಉದ್ಯೋಗಿಗಳಿಗೆ ಆಫರ್ ವೊಂದನ್ನು ನೀಡಿದೆ.
ಟ್ಯಾಟ್‌ಪ್ರೊಫ್ ಎಂಬ ಅಲ್ಯೂಮಿನಿಯಂ ಉತ್ಪಾದಕ ಕಂಪನಿ ತಮ್ಮ ಮಹಿಳಾ ಉದ್ಯೋಗಿಗಳು ಸ್ಕರ್ಟ್ ಹಾಗೂ ಡ್ರೆಸ್‌ಗಳನ್ನು ಹಾಕಿಕೊಂಡು ಕೆಲಸಕ್ಕೆ ಬಂದರೆ ನಗದು ಬೋನಸ್ ನೀಡುವುದಾಗಿ ತಿಳಿಸಿದೆ. ಮೊಣಕಾಲಿನಿಂದ ಕೆಳಗೆ ಐದು ಸೆಂಟಿಮೀಟರ್ ಮೀರದಂತೆ ಕಡಿಮೆ ಅಳತೆಯ ಮಿನಿ ಸ್ಕರ್ಟ್ ಹಾಗೂ ಡ್ರೆಸ್‌ಗಳನ್ನು ಹಾಕಿಕೊಂಡ ಬಂದ ಮಹಿಳಾ ಉದ್ಯೋಗಿಗಳಿಗೆ ಸಂಬಳದ ಜತೆಗೆ ಎಕ್ಸ್‌ಟ್ರಾ 100ರೂ ಬೋನಸ್ ನೀಡಲಾಗುವುದು.
ಈ ಕ್ಯಾಂಪೇನ್‌ನಲ್ಲಿ ಈಗಾಗಲೇ 60 ಮಹಿಳೆಯರು ಭಾಗಿಯಾಗಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಾರೀ ವಿರೋಧ ವ್ಯಕ್ತವಾಗಿದೆ.