Select Your Language

Notifications

webdunia
webdunia
webdunia
webdunia

ಪುರುಷನ ಸೋಗಿನಲ್ಲಿ ಬಂದು ಬ್ಯಾಂಕ್ ದರೋಡೆ ಮಾಡಿದ ಮಹಿಳೆ

Woman robbed
ಕ್ಯಾಲಿಫೋರ್ನಿಯಾ , ಶುಕ್ರವಾರ, 26 ಮೇ 2017 (12:10 IST)
ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಇತ್ತೀಚೆಗೆ ಬ್ಯಾಂಕ್‌ ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ಕ್ಯಾಲಿಫೋರ್ನಿಯಾದ ಬ್ಯಾಂಕೊಂದಕ್ಕೆ ಅಡಿಯಿಂದ ಮುಡಿಯವರೆಗೆ ಕಪ್ಪು ವಸ್ತ್ರ ಧರಿಸಿದ್ದ, ಗಡ್ಡಧಾರಿಯೊಬ್ಬ ಸಂಶಯಾಸ್ಪದ ರೀತಿಯಲ್ಲಿ ಬಂದಿದ್ದಾನೆ. ಬ್ಯಾಂಕ್‌ನ ಕ್ಯಾಶಿಯರ್‌ರನ್ನು ಬೆದರಿಸಿ ಹಣ ದೋಚಿ ಪರಾರಿಯಾಗಿದ್ದಾನೆ. 
 
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಕಳ್ಳನನ್ನು ಪತ್ತೆ ಮಾಡಲು ಮುಂದಾಗಿದ್ದಾರೆ. ಆಗ ಪೊಲೀಸರಿಗೆ ಶಾಕ್ ಆಗಿದೆ. ಹೀಗೆ ಬ್ಯಾಂಕ್ ದೋಚಿಕೊಂದು ಹೋದದ್ದು ಕಳ್ಳನಲ್ಲ, ಕಳ್ಳಿ ಎಂದು. 
 
ಮುಖಕ್ಕೆ ಗಡ್ಡದ ರೀತಿ ಬಣ್ಣ ಬಳಿದುಕೊಂಡು ಸನ್‌ ಗ್ಲಾಸ್‌ ಹಾಕಿಕೊಂಡು ಪುರುಷನ ಸೋಗಿನಲ್ಲಿ ಬಂದು ದರೋಡೆ ಮಾಡಿರುವುದು ಮಹಿಳೆ. ಮತ್ತೂಂದು ಆಶ್ಚರ್ಯಕರ ವಿಷಯವೆಂದರೆ ಆಕೆ ಮಾಜಿ ಪೊಲೀಸ್‌ ಅಧಿಕಾರಿ ಎಂಬುದು. ಕೊನಗೂ ಕಳ್ಳಿಯನ್ನು ಪತ್ತೆಹಚ್ಚಿರು ಪೊಲೀಸರು ದರೋಡೆಕೋರಿಯನ್ನು ಬಂಧಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಶನಿವಾರ ಸಿಬಿಎಸ್ಇ ಪರೀಕ್ಷೆ ಫಲಿತಾಂಶ ಪ್ರಕಟ ಸಾಧ್ಯತೆ