Publish Date: Thu, 31 Aug 2017 (15:22 IST)
Updated Date: Thu, 31 Aug 2017 (15:35 IST)
ಮೆಟ್ರೋ ಬಸ್ ಚಾಲಕನೊಬ್ಬ ಸಂತೋಷದ ದಿನವಾಗಲಿ ಎಂದು ಹೇಳಿದ್ದಕ್ಕಾಗಿ ಮಹಿಳೆಯೊಬ್ಬಳು ಆಕ್ರೋಶದಿಂದ ಆತನ ಮೇಲೆ ಮೂತ್ರ ಎಸೆದು ಪೊಲೀಸ್ ಅತಿಥಿಯಾದ ಘಟನೆ ವರದಿಯಾಗಿದೆ.
ಆಗ್ನೇಯ ವಾಷಿಂಗ್ಟನ್ ನಗರದ ನಿವಾಸಿಯಾದ 28 ವರ್ಷ ವಯಸ್ಸಿನ ಮಹಿಳಾ ಆರೋಪಿ ಓಪಲ್ ಎಲ್.ಬ್ರೌನ್‌ರನ್ನು ಎಲ್. ಇನ್‌ಫಾಂಟ್ ಪ್ಲಾಜಾದಲ್ಲಿ ಬಂಧಿಸಲಾಗಿದೆ.
ಮೆಟ್ರೋ ವಕ್ತಾರರ ಪ್ರಕಾರ, ಬಸ್ ಚಾಲಕ ಸರಳವಾಗಿಯೇ ಮಹಿಳೆಗೆ ಸಂತೋಷದ ದಿನವಾಗಲಿ ಎಂದು ಹಾರೈಸಿದ್ದಾನೆ. ಆದರೆ, ಆಕೆ ತಪ್ಪಾಗಿ ಅರ್ಥ ಮಾಡಿಕೊಂಡು ತಾನು ಪ್ಲ್ಯಾಸ್ಟಿಕ್ ಕಪ್‌ನಲ್ಲಿ ಸಂಗ್ರಹಿಸಿದ್ದ ಮೂತ್ರವನ್ನು ಚಾಲಕನ ಮೇಲೆ ಎಸೆದಿದ್ದಾಳೆ ಎಂದು ತಿಳಿಸಿದ್ದಾರೆ.
ಬಸ್ ಚಾಲಕ ಕೆಟ್ಟದಾಗಿ ಹಾರೈಸಿದ್ದರಿಂದ ಕೋಪೋದ ಭರದಲ್ಲಿ ಆತನ ಮೇಲೆ ಮೂತ್ರ ಎಸೆದಿದ್ದಾಗಿ ಆರೋಪಿ ಮಹಿಳೆ ಬ್ರೌನ್ ತಪ್ಪೊಪ್ಪಿಕೊಂಡಿದ್ದಾಳೆ.
ಆರೋಪಿ ಮಹಿಳೆ ಬಂಧನಕ್ಕೆ ಮುಂಚೆ ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್‌ಬುಕ್‌ನಲ್ಲಿ ಸುದ್ದಿಯನ್ನು ಪೋಸ್ಟ್ ಮಾಡಿ ತಾನು ನಡೆಸಿದ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ. ಚಾಲಕನ ಅಸಭ್ಯ ವರ್ತನೆ ನನಗೆ ಹಾಗೇ ಮಾಡಲು ಪ್ರೇರೇಪಿಸಿತು ಎಂದು ತಿಳಿಸಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.