Publish Date: Fri, 23 Jun 2017 (15:13 IST)
Updated Date: Fri, 23 Jun 2017 (15:16 IST)
ಕ್ಯಾಲಿಫೋರ್ನಿಯಾ: ಹೀಗೂ ಮದುವೆ ಆಕ್ತಾರಾ...? ಏನೋಪ್ಪಾ.. ಇಲ್ಲೊಬ್ಬ 45 ವರ್ಷದ ಯುವತಿ ರೈಲು ನಿಲ್ದಾಣವನ್ನೇ ಮದುವೆಯಾಗಿದ್ದಾಳೆ ಕಣ್ರಿ... ಕಳೆದ 36 ವರ್ಷಗಳಿಂದ ಈಕೆ ‘ಸಾಂತಾ ಫೆ’ ರೈಲು ನಿಲ್ದಾಣವನ್ನು ಪ್ರೀತಿಸುತ್ತಿದ್ದಾಳಂತೆ, ಅಷ್ಟೇ ಅಲ್ಲ ಮಾನಸಿಕವಾಗಿ ಅದರ ಜೊತೆಗೆ ಸಂಭೋಗ ಕೂಡ ನಡೆಸಿದ್ದಾಳಂತೆ.
ಕ್ಯಾಲಿಫೋರ್ನಿಯಾದ ಕರೋಲ್ ಸೇಂಟ್ ಎಂಬುವವರು ಸಾಂಟಾ ಫೆ ರೈಲು ನಿಲ್ದಾಣಕ್ಕೆ ತಮ್ಮ ಒಂಭತ್ತನೇ ವಯಸ್ಸಿನಿಂದ ಬರುತ್ತಿದ್ದಾರಂತೆ. ಆಗನಿಂದಲೂ ಇವರಿಗೆ ರೈಲು ನಿಲ್ದಾಣದ ಮೇಲೆ ವಿಚಿತ್ರ ಪ್ರೀತಿ. ರೈಲು ನಿಲ್ದಾಣದಲ್ಲೇ ಹೆಚ್ಚಿನ ಸಮಯವನ್ನೂ ಕಳಿತಿದ್ದಳಂತೆ. ಅಂತೂ ಇಂತೂ ಆ ಜೋಡಿಯ 36 ವರ್ಷದ ಪ್ರೀತಿ ಫಲಿಸಿ 2015ರಲ್ಲಿ ಆಕೆ ರೈಲು ನಿಲ್ದಾಣವನ್ನೇ ಮದುವೆನೂ ಮಾಡಿಕೊಂಡಿದ್ದಾಳೆ. ಅಷ್ಟೇ ಅಲ್ಲ ಮೊದಲ ವಿವಾಹ ವಾರ್ಷಿಕೋತ್ಸವವನ್ನೂ ಸೆಲೆಬ್ರೇಟ್ ಮಾಡಿದ್ದಾಳೆ. ಇನ್ನೂ ವಿಚಿತ್ರ ಅಂದ್ರೆ ಪ್ರತಿದಿನ ರಾತ್ರಿ ರೈಲ್ವೆ ನಿಲ್ದಾಣಕ್ಕೆ ಬರುವ ಕರೋಲ್, ಕಟ್ಟಡದ ಜೊತೆಗೆ ಗುಟ್ಟಾಗಿ ಮಾತನಾಡ್ತಾಳೆ. ಗೋಡೆಗಳನ್ನು ತಬ್ಬಿಕೊಳ್ತಾಳೆ. ಆಗ ಕಟ್ಟಡ ಕೂಡ ತನಗೆ ಮುತ್ತಿಟ್ಟಂತಹ ಭಾವನೆ ಆಕೆಯಲ್ಲಿ ಮೂಡುತ್ತದೆಯಂತೆ. ತನ್ನ ಪತಿ (ರೈಲು ನಿಲ್ದಾಣ)ಗೆ ಈಕೆ ಪ್ರೀತಿಯಿಂದ ದಾಯಿದ್ರ ಎಂದು ಹೆಸರನ್ನು ಕೂಡ ಇಟ್ಟಿದ್ದಾಳೆ.
ಈ ರೈಲು ನಿಲ್ದಾಣವನ್ನು ಮದುವೆ ಆಗುವುದಕ್ಕೂ ಮೊದಲು ಕರೋಲ್, ಟಾಮ್ ಎಂಬುವರನ್ನು ವರಿಸಿದ್ದರಂತೆ. ಆದರೆ, ಇಬ್ಬರ ಮಧ್ಯೆ ಸಂಬಂಧ ಸರಿಹೊಂದಲಿಲ್ಲ. 18 ತಿಂಗಳು ಮಾತ್ರ ಅವರು ಜೊತೆಯಾಗಿದ್ದರು. ಬಳಿಕ ಆ ವಿವಾಹ ಮುರಿದು ಬಿತ್ತು. ಹಾಗಾಗಿ ಕರೋಲ್ ತನ್ನ ಹಳೆ ಬಾಯ್ ಫ್ರೆಂಡ್ ಸಾಂಟಾ ಫೆ ರೈಲು ನಿಲ್ದಾಣವನ್ನೇ ಮದುವೆಯಾದಳಂತೆ.