Select Your Language

Notifications

webdunia
webdunia
webdunia
webdunia

ವಿಶ್ವನಾಥ್ ಬಿಟ್ರೆ ಕಾಂಗ್ರೆಸ್ ಪಕ್ಷವೇನೂ ಸಾಯೋದಿಲ್ಲ: ವಿನಯ್ ಕುಲ್ಕರ್ಣಿ

ವಿಶ್ವನಾಥ್ ಬಿಟ್ರೆ ಕಾಂಗ್ರೆಸ್ ಪಕ್ಷವೇನೂ ಸಾಯೋದಿಲ್ಲ: ವಿನಯ್ ಕುಲ್ಕರ್ಣಿ
ಧಾರವಾಡ , ಶುಕ್ರವಾರ, 23 ಜೂನ್ 2017 (14:40 IST)
ಮಾಜಿ ಸಂಸದ ಎಚ್.ವಿಶ್ವನಾಥ್ ಪಕ್ಷ ತೊರೆದ್ರೆ ಕಾಂಗ್ರೆಸ್ ಪಕ್ಷವೇನು ಸಾಯಿವುದಿಲ್ಲ ಎಂದು ಸಚಿವ ವಿನಯ್ ಕುಲ್ಕರ್ಣಿ ಹೇಳಿದ್ದಾರೆ.
 
ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ, ಬರುವವರು ಬರುತ್ತಾರೆ, ಹೋಗುವವರು ಹೋಗುತ್ತಾ ಇರುತ್ತಾರೆ. ವಿಶ್ವನಾಥ್ ಪಕ್ಷದಲ್ಲಿ ಇದ್ದರೆಷ್ಟು? ಬಿಟ್ಟರೆಷ್ಟು? ಎಂದು ವಾಗ್ದಾಳಿ ನಡೆಸಿದ್ದಾರೆ.
 
ಇಂಥಹವರು ಹಲವರಿದ್ದರು ಅವರೆಲ್ಲಾ ಪಕ್ಷ ಬಿಟ್ಟಿದ್ದಾರೆ. ಯಾರು ಪಕ್ಷ ಬಿಟ್ಟರೂ ಕಾಂಗ್ರೆಸ್ ಪಕ್ಷ ಮುಂದೆ ಹೋಗುತ್ತಿರುತ್ತದೆ. ನಾನೇ ಎಲ್ಲಾ ಅನ್ನುವವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನವಿರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ಕೆಪಿಸಿಸಿ ಅಧ್ಯಕ್ಷರಾದ ಜಿ.ಪರಮೇಶ್ವರ್, ಹಲವಾರು ಬಾರಿ ವಿಶ್ವನಾಥ್ ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ಅವರು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವ ಹಂತದಲ್ಲಿರುವುದರಿಂದ ನಾವೇನು ಮಾಡಲು ಸಾಧ್ಯ ಎಂದು ಸಚಿವ ವಿನಯ್ ಕುಲ್ಕರ್ಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಾ ತಪ್ಪಿತಸ್ಥ ಎಂದಾದ್ರೆ ನೇಣು ಹಾಕಿಕೊಳ್ತೇನೆ : ಕುಮಾರಸ್ವಾಮಿ ಘೋಷಣೆ