ಮಹ್ಸಾ ಅಮಿನಿ ಯುವತಿ ಹಿಜಬ್ ಧರಿಸಿಲ್ಲ ಎಂಬ ಕಳೆದ ವರ್ಷ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿತ್ತು. ನೈತಿಕ ಪೊಲೀಸ್ಗಿರಿಗೆ ಆಕೆ ಬಲಿಯಾಗಿದ್ದಳು. ಸಾವಿನ ಸುದ್ದಿ ಬಹಿರಂಗವಾಗುತ್ತಿದ್ದಂತೆ ಇರಾನ್ನಲ್ಲಿ ಸಾವಿರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು.
ಯುವತಿ ಸಾವಿನ ಬಳಿಕ ಇರಾನ್ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಸುಮಾರು 14,000 ಮಂದಿಯನ್ನು ಆಗ ಬಂಧಿಸಲಾಗಿತ್ತು. ಅವರಲ್ಲಿ ಸಾವಿರಾರು ಪುರುಷರು, ಮಹಿಳೆಯರು, ಮಕ್ಕಳೂ ಸೇರಿದ್ದರು.
ಮಾತ್ರವಲ್ಲದೇ ಹಿಜಬ್ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿ ಹಲವರು ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಿಕೊಂಡು, ನಡುರಸ್ತೆಯಲ್ಲೇ ಹಿಜಬ್ ಸುಟ್ಟು ಆಕ್ರೋಶ ಹೊರಹಾಕಿದ್ದರು. ಈ ಎಲ್ಲಾ ಘಟನೆ ವಿರುದ್ಧ ಸೇಡು ತೀರಿಸಿಕೊಳ್ಳಲು ಹಾಗೂ ಹೆಣ್ಣುಮಕ್ಕಳನ್ನು ನಿಯಂತ್ರಣದಲ್ಲಿರಿಸುವ ಸಲುವಾಗಿ ವಿಷವುಣಿಸುವಂತಹ ಕೃತ್ಯ ನಡೆಸಲಾಗುತ್ತಿದೆ ಮಾತು ಕೇಳಿಬರುತ್ತಿದೆ.