Select Your Language

Notifications

webdunia
webdunia
webdunia
webdunia

ಕೋವಿಡ್ ಪಾಸ್ಪೋರ್ಟ್ ಎಂದರೇನು..? ಬೇರೆ ಬೇರೆ ದೇಶಗಳಲ್ಲಿ ಹೇಗೆ ಬಳಸಲಾಗುತ್ತದೆ?

ಕೋವಿಡ್ ಪಾಸ್ಪೋರ್ಟ್ ಎಂದರೇನು..? ಬೇರೆ ಬೇರೆ ದೇಶಗಳಲ್ಲಿ ಹೇಗೆ ಬಳಸಲಾಗುತ್ತದೆ?
ನವದೆಹಲಿ , ಶುಕ್ರವಾರ, 30 ಜುಲೈ 2021 (21:04 IST)
ಸಮಯ ಕಳೆದಂತೆ ಹೆಚ್ಚಿನ ದೇಶಗಳು ಕೋವಿಡ್ ಪಾಸ್ಪೋರ್ಟ್ಗಳಿಗೆ ಆದ್ಯತೆ ನೀಡುತ್ತಿದ್ದು, ಈ ಪಾಸ್ಪೋರ್ಟ್ಗಳು ಜನರಿಗೆ ಪ್ರಯಾಣ ಮಾಡಲು ಅವಕಾಶ ನೀಡುತ್ತವೆ. ಇದನ್ನು ನಿಮ್ಮ ಫೋನ್ನ ಆ್ಯಪ್ ಮೂಲಕ ಪಡೆದುಕೊಳ್ಳಬಹುದಾಗಿದ್ದು ಕೆಲವೊಂದು ಸಂದರ್ಭಗಳಲ್ಲಿ ಕಾಗದ ರೂಪದಲ್ಲಿಯೂ ಲಭ್ಯವಿರುತ್ತದೆ.

ಕೆಲವೊಂದು ದೇಶಗಳು ತಮ್ಮದೇ ಆದ ಕೋವಿಡ್ ಪಾಸ್ಪೋರ್ಟ್ಗಳನ್ನು ಹೊಂದಿದ್ದು ಜನರಿಗೆ ದೊಡ್ಡ ಪ್ರಮಾಣದಲ್ಲಿ ಸಮಾರಂಭಗಳಲ್ಲಿ ಭಾಗವಹಿಸಲು ಅನುಮತಿ ನೀಡುತ್ತವೆ. ಆದರೆ ಇನ್ನು ಕೆಲವೊಂದು ದೇಶಗಳು ಲಸಿಕೆಗಳ ಒದಗಿಸುವಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಯಶಸ್ಸನ್ನು ಕಾಣದೇ ಇರುವುದರಿಂದ ಈ ಪಾಸ್ಪೋರ್ಟ್ಗಳನ್ನು ನೀಡಲು ಹಿಂದೇಟು ಹಾಕುತ್ತಿವೆ.
ವ್ಯಾಕ್ಸಿನ್ ಪಾಸ್ಪೋರ್ಟ್ಗಳನ್ನು ಅನ್ವಯಿಸಿಕೊಂಡಿರುವ ಕೆಲವೊಂದು ದೇಶಗಳ ಪಟ್ಟಿಯನ್ನು ಇಲ್ಲಿ ನೀಡಿದ್ದು ಅವುಗಳ ನಿಯಮ, ಮಾರ್ಗಸೂಚಿಗಳು ಹೇಗಿವೆ ಎಂಬುದನ್ನು ತಿಳಿದುಕೊಳ್ಳೋಣ.
ಇಂಗ್ಲೆಂಡ್
ಈ ದೇಶದಲ್ಲಿ ನೈಟ್ ಕ್ಲಬ್ಗಳಲ್ಲಿ ವ್ಯಾಕ್ಸಿನ್ ಆಧಾರವನ್ನು ತೋರಿಸಬೇಕಾಗಿಲ್ಲ. ಆದರೂ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಸಂಪೂರ್ಣ ಲಸಿಕೆ ಕಡ್ಡಾಯ ಎಂದು ಘೋಷಿಸಿದ್ದಾರೆ. NHS ಕೋವಿಡ್ ಪಾಸ್ ಆ್ಯಪ್ ಬಳಸುವ ಮೂಲಕ ವ್ಯಾಕ್ಸಿನೇಶನ್ ಆಧಾರವನ್ನು ತೋರಿಸುತ್ತಾರೆ.
NHS ಕೋವಿಡ್ ಪಾಸ್ ಇಂಗ್ಲೆಂಡ್ನ ಇತರ ಭಾಗಗಳಲ್ಲಿ ಕೂಡ ಸಮಾನ ಹಕ್ಕನ್ನು ಹೊಂದಿವೆ. ಈ ಪಾಸ್ ಇದ್ದರೆ ಕ್ವಾರಂಟೈನ್ನಲ್ಲಿ ಇರಬೇಕೆಂಬ ಕಡ್ಡಾಯವಿರುವುದಿಲ್ಲ. ಆದರೆ ಫ್ರಾನ್ಸ್ನಿಂದ ಇಂಗ್ಲೆಂಡ್ಗೆ ಮರಳಿದಲ್ಲಿ ಪಾಸ್ ಇದ್ದರೂ ಕೂಡ ಅವರು ಸ್ವಯಂ-ಐಸೋಲೇಶನ್ಗೆ ಒಳಗಾಗಬೇಕಾಗುತ್ತದೆ.
ಯುರೋಪಿಯನ್ ಒಕ್ಕೂಟ
ಸ್ವಿಟ್ಜರ್ಲ್ಯಾಂಡ್, ಐಸ್ಲ್ಯಾಂಡ್, ನಾರ್ವೆ ಮತ್ತು ಲಿಚ್ಟೆನ್ಸ್ಟೈನ್ ಒಳಗೊಂಡಂತೆ ಎಲ್ಲಾ 27 ಸದಸ್ಯ ರಾಷ್ಟ್ರಗಳು ಲಸಿಕೆ ಪಾಸ್ಪೋರ್ಟ್ ಪರಿಚಯಿಸಿವೆ.ಈ ದೇಶಗಳ ನಾಗರಿಕರು ಪಾಸ್ಪೋರ್ಟ್ ಅನ್ನು ಡೌನ್ಲೋಡ್ ಮಾಡಬಹುದು ಅಥವಾ ಕಾಗದ ಪ್ರತಿಯನ್ನು ಪಡೆಯಬಹುದು. ಸದಸ್ಯ ರಾಷ್ಟ್ರಗಳಿಗೆ ಪ್ರಯಾಣಿಸುವ ಹಕ್ಕು ಹೊಂದಿರುವ ಈ ದೇಶಗಳಲ್ಲಿ ಕಾನೂನು ಬದ್ಧವಾಗಿ ವಾಸಿಸುವ ಯುರೋಪಿಯನ್ ಒಕ್ಕೂಟವಲ್ಲದ ನಾಗರಿಕರಿಗೂ ಲಭ್ಯವಿದೆ.
ಫ್ರಾನ್ಸ್
ಫ್ರಾನ್ಸ್ನ ಅಧಿಕಾರಿಗಳು ಆರೋಗ್ಯ ಪಾಸ್ ನೀಡುತ್ತಿದ್ದು, ಈ ಪಾಸ್ ಹೊಂದಿರುವವರು ರೆಸ್ಟೋರೆಂಟ್, ಬಾರ್, ವಿಮಾನ ಹಾಗೂ ಟ್ರೈನ್ಗಳನ್ನು ಪ್ರವೇಶಿಸಬಹುದು. ಈ ಪಾಸ್ ಪಡೆಯಲು ಪೂರ್ಣ ಲಸಿಕೆ ಪಡೆಯಲಾಗಿದೆ ಎಂಬ ದಾಖಲೆ ಅಗತ್ಯವಾಗಿದೆ.
ಇಸ್ರೇಲ್
ಇಸ್ರೇಲ್ ಲಸಿಕೆ ಪಾಸ್ ಅನ್ನು ವರ್ಷದ ಆರಂಭದಲ್ಲಿಯೇ ಪರಿಚಯಿಸಿದೆ. ವ್ಯಾಕ್ಸಿನ್ ಪಡೆದ ದಾಖಲೆ ತೋರಿಸಿ ಈ ಪಾಸ್ ಪಡೆದುಕೊಳ್ಳಬಹುದಾಗಿದೆ. ಯುವ ಜನರಲ್ಲಿ ವ್ಯಾಕ್ಸಿನ್ ಮಹತ್ವವನ್ನು ಸಾರಲು ಪಾಸ್ ಸಹಕಾರಿಯಾಗಿದೆ. ಆದರೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿರುವುದರಿಂದ ಸರಕಾರವು ಯೋಜನೆಯನ್ನು ಪುನಃಸ್ಥಾಪಿಸುವ ನಿರ್ಧಾರದಲ್ಲಿದೆ.
ಚೀನಾ
ಚೀನಾ ಕ್ಯೂಆರ್ ಕೋಡ್ ಸಿಸ್ಟಮ್ ಅನ್ನು ಕಳೆದ ವರ್ಷವೇ ಪರಿಚಯಿಸಿದ್ದು ಬೇರೆ ಬೇರೆ ಬಣ್ಣಗಳಲ್ಲಿ ಅಸ್ತಿತ್ವಕ್ಕೆ ಬಂದಿದೆ. ಹಸಿರು ಬಣ್ಣವು ಯಾವುದೇ ನಿರ್ಬಂಧವಿಲ್ಲದೆ ಜನರಿಗೆ ಪ್ರಯಾಣಿಸಲು ಅನುಮತಿ ನೀಡುತ್ತದೆ .ಆದರೆ ಹಳದಿ ಬಣ್ಣದ ಕೋಡ್ ಹೊಂದಿರುವವರು ಮನೆಯಲ್ಲಿ ಏಳು ದಿನಗಳ ಕಾಲ ಇರಬೇಕಾಗುತ್ತದೆ. ಚೀನಾದಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ಪ್ರದರ್ಶಿಸಿಯೇ ಪ್ರವೇಶ ಪಡೆಯಬೇಕು.
ಅಮೆರಿಕ
ಅಮೆರಿಕದಲ್ಲಿ ಕಡ್ಡಾಯ ಫೆಡರಲ್ ಕೋವಿಡ್ ಲಸಿಕೆ ಪಾಸ್ಪೋರ್ಟ್ಗಳನ್ನು ಪರಿಚಯಿಸಲಾಗಿದೆ. ಆದರೆ ದೇಶದ ಕೆಲವೊಂದು ನಗರಗಳು ಲಸಿಕೆಯ ಪ್ರಮಾಣ ಹೆಚ್ಚಿಸಲು ತಮ್ಮದೇ ಮಾನದಂಡಗಳನ್ನು ಪರಿಚಯಿಸಿವೆ. ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ನಗರಗಳು ಲಸಿಕೆ ಪಡೆದ ದಾಖಲೆಗಳನ್ನು ಪ್ರದರ್ಶಿಸುವ ವ್ಯವಸ್ಥೆ ಜಾರಿಗೆ ತಂದಿವೆ.
ಆಸ್ಟ್ರೇಲಿಯ
ಪ್ರಸ್ತುತ ಆಸ್ಟ್ರೇಲಿಯ ಡಿಜಿಟಲ್ ಪ್ರಮಾಣಪತ್ರವನ್ನು ಫೋನ್ಗಳಲ್ಲಿ ಹೊಂದಿದ್ದು ಅದನ್ನು ಲಗತ್ತಿಸುವ ಹಕ್ಕುಗಳನ್ನು ಹೊಂದಿಲ್ಲ. ದೇಶದ ಪ್ರವಾಸೋದ್ಯಮ ಸಚಿವ ಡಾನ್ ತೆಹನ್ ತಿಳಿಸಿರುವಂತೆ ಲಸಿಕೆ ಪಾಸ್ಪೋರ್ಟ್ ಹೊಂದಿರುವವರಿಗೆ ಲಾಕ್ಡೌನ್ ಸಮಯದಲ್ಲಿ ಗಡಿಗಳಲ್ಲಿ ಪ್ರಯಾಣಿಸಲು ಹಾಗೂ ಏಕಾಏಕಿ ಲಾಕ್ಡೌನ್ ವಿಧಿಸಿರುವ ರಾಜ್ಯದ ಕೆಲವು ಭಾಗಗಳಿಗೆ ಅನುಮತಿ ನೀಡುತ್ತವೆ ಎಂದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ನಗರದಲ್ಲಿ ಲಸಿಕೆ ಕೊರತೆ