ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ವಿಧಿಸಿರುವ ದುಬಾರಿ ಸುಂಕ ನೀತಿ ಇಂದಿನಿಂದ ಜಾರಿಗೆ ಬರಲಿದೆ. ಈ ಸುಂಕ ನೀತಿಯಿಂದ ಭಾರತದ ಯಾವೆಲ್ಲಾ ಉದ್ಯಮಗಳಿಗೆ ಹೊಡೆತ ಬೀಳಲಿದೆ ಇಲ್ಲಿದೆ ವಿವರ.
ಭಾರತದ ಉತ್ಪನ್ನಗಳಿಗೆ ಅಮೆರಿಕಾ 25% ಸುಂಕ ವಿಧಿಸಿದೆ. ರಷ್ಯಾ ಜೊತೆಗಿನ ಭಾರತದ ಸ್ನೇಹ ಸಂಬಂಧ, ವಾಣಿಜ್ಯ ವಹಿವಾಟುಗಳು ಡೊನಾಲ್ಡ್ ಟ್ರಂಪ್ ನಿದ್ದೆಗೆಡಿಸಿದೆ. ಇನ್ನೊಂದೆಡೆ ಅಮೆರಿಕಾದ ಮಾಂಸಾಹಾರ ಹಾಲು ಭಾರತದ ಮಾರುಕಟ್ಟೆ ಪ್ರವೇಶಿಸಲು ಭಾರತ ಒಪ್ಪದೇ ಇರುವುದು ಟ್ರಂಪ್ ಕೋಪಕ್ಕೆ ಕಾರಣವಾಗಿದೆ. ಈ ಎಲ್ಲಾ ಕಾರಣಗಳಿಗೆ ಭಾರತಕ್ಕೆ ಹಿಡಿಶಾಪ ಹಾಕಿ ಭಾರೀ ಸುಂಕ ನಿಗದಿಗೊಳಿಸಿದ್ದಾರೆ. ಇದು ಇಂದಿನಿಂದಲೇ ಜಾರಿಗೆ ಬರಲಿದೆ.
ಔಷಧೀಯ ವಸ್ತುಗಳು
ಅಮೆರಿಕಾಗೆ ಭಾರತ ಔಷಧೀಯ ವಸ್ತುಗಳನ್ನು ಭಾರೀ ಪ್ರಮಾಣದಲ್ಲಿ ರಫ್ತು ಮಾಡುತ್ತದೆ. ಇದರಿಂದ ಭಾರತಕ್ಕೆ ವಾರ್ಷಿಕವಾಗಿ 8 ಬಿಲಿಯನ್ ಡಾಲರ್ ವ್ಯವಹಾರವಾಗುತ್ತಿದೆ. ಭಾರತದ ಪ್ರಮುಖ ಔಷಧಿ ತಯಾರಿಕಾ ಸಂಸ್ಥೆಗಳಿಗೆ ಅಮೆರಿಕಾಗೆ ರಫ್ತು ಮಾಡುವ ವಸ್ತುಗಳಿಂದಲೇ ಆದಾಯ ಸಿಗುತ್ತಿದೆ. ಈ ಉದ್ಯಮಗಳಿಗೆ ಹೊಡೆತವಾಗಲಿದೆ.
ಜವಳಿ ಉದ್ಯಮ
ಭಾರತದಲ್ಲಿ ತಯಾರಾಗುವ ಫ್ಯಾಬ್ರಿಕ್ಸ್, ಶೂಗಗಳಿಗೆ ಅಮೆರಿಕಾದ ದೈತ್ಯ ಮಳಿಗೆಗಳು ಮಾರುಕಟ್ಟೆಗಳಾಗಿವೆ. ಆದರೆ ಈಗ ದುಬಾರಿ ಸುಂಕದಿಂದ ಈ ಉದ್ಯಮಗಳಿಗೆ ಹೊಡೆತ ಬೀಳಲಿದೆ.
ರತ್ನಗಳು, ಆಭರಣಗಳು
ಅಮೆರಿಕಾಗೆ ಭಾರತ 10 ಬಿಲಿಯನ್ ಡಾಲರ್ ನಷ್ಟು ಮುತ್ತು, ಆಭರಣಗಳನ್ನು ರಫ್ತು ಮಾಡುತ್ತಿದೆ. ಆದರೆ ಈಗ ದುಬಾರಿ ಸುಂಕದಿಂದ ರಫ್ತು ಮಾಡಲು ಹೆಚ್ಚು ಸಮಯ ಮತ್ತು ವೆಚ್ಚ ಹೆಚ್ಚಾಗಲಿದೆ.
ಎಲೆಕ್ಟ್ರಾನಿಕ್ಸ್
ಭಾರತದ ಸ್ಮಾರ್ಟ್ ಫೋನ್ ಗಳ ರಫ್ತು ಪ್ರಮಾಣ ಕಳೆದ ಮೂರು ವರ್ಷಗಳಲ್ಲಿ ಗಣನೀಯವಾಗಿ ಏರಿಕೆಯಾಗಿತ್ತು. ಇತ್ತೀಚೆಗಷ್ಟೇ ಚೀನಾವನ್ನೂ ಭಾರತ ಹಿಂದಿಕ್ಕಿತ್ತು. ಆದರೆ ಈಗ ಇವುಗಳ ಸಾಗಣೆಗೂ ಹೊಡೆತ ಬೀಳಲಿದೆ.
ತೈಲೋದ್ಯಮ
ರಷ್ಯಾದ ತೈಲ ಸಂಸ್ಕರಣೆಗಳ ಮೇಲೆ ದುಬಾರಿ ಸುಂಕ ವಿಧಿಸಿರುವುದರಿಂದ ಅಲ್ಲಿಂದ ಭಾರತ ಭಾರೀ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುವುದರಿಂದ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ತೈಲ ಖರೀದಿ ಮತ್ತಷ್ಟು ದುಬಾರಿಯಾಗಲಿದೆ.