Select Your Language

Notifications

webdunia
webdunia
webdunia
Friday, 4 April 2025
webdunia

ಉಕ್ರೇನ್‌ನೊಂದಿಗೆ ಮಾತುಕತೆಗೆ ನಾವು ಸಿದ್ಧ: ಪುಟಿನ್

ಯುದ್ಧ
ಮಾಸ್ಕೋ , ಸೋಮವಾರ, 26 ಡಿಸೆಂಬರ್ 2022 (09:11 IST)
ಮಾಸ್ಕೋ : ನಾವು ಉಕ್ರೇನ್ ಮೇಲೆ ಹೆಚ್ಚಿನ ದಾಳಿ ನಡೆಸುತ್ತಿದ್ದರೂ ನಾವಿದನ್ನು ನಿಲ್ಲಿಸಲು ಉಕ್ರೇನ್ನೊಂದಿಗೆ ಮಾತುಕತೆಗೆ ಸಿದ್ಧರಾಗಿದ್ದೇವೆ ಎಂದು ರಷ್ಯಾ  ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೆ ನೀಡಿದ್ದಾರೆ.
 
ಭಾನುವಾರ ದೂರದರ್ಶನ ಸಂದರ್ಶನವೊಂದರಲ್ಲಿ ಮಾತನಾಡಿದ ಪುಟಿನ್, ನಾವು ಉಕ್ರೇನ್ನೊಂದಿಗೆ ನಡೆಸುತ್ತಿರುವ ಯುದ್ಧವನ್ನು ನಿಲ್ಲಿಸಲು ಮಾತುಕತೆಗೆ ಸಿದ್ಧರಾಗಿದ್ದೇವೆ. ಮಾತುಕತೆಗೆ ಮುಂದಾಗುವ ಎಲ್ಲರೊಂದಿಗೂ ನಾವು ಸ್ವೀಕಾರಾರ್ಹ ಫಲಿತಾಂಶದ ಬಗ್ಗೆಯೇ ಚರ್ಚಿಸುತ್ತೇವೆ ಎಂದು ತಿಳಿಸಿದ್ದಾರೆ.

ಮಾತುಕತೆಯನ್ನು ನಿರಾಕರಿಸುತ್ತಿರುವುದು ನಾವಲ್ಲ, ಬದಲಿಗೆ ಅವರೇ. ನಾವು ಸರಿಯಾದ ಮಾರ್ಗದಲ್ಲೇ ಸಾಗುತ್ತಿದ್ದೇವೆ ಎಂಬುದನ್ನು ನಾವು ನಂಬುತ್ತೇವೆ. ನಾವು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು, ನಮ್ಮ ನಾಗರಿಕರು, ನಮ್ಮ ಜನರ ಹಿತಾಸಕ್ತಿಗಳನ್ನು ರಕ್ಷಿಸುತ್ತಿದ್ದೇವೆ ಎಂದು ಪುಟಿನ್ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಯಾಣಿಕರಿಗೆ ಕೋವಿಡ್ ಮಾರ್ಗಸೂಚಿ ಪ್ರಕಟ