ಆಸ್ಟ್ರೇಲಿಯಾದ ಅಪ್ರಾಪ್ತ ವಯಸ್ತ ಬಾಲಕಿಯೊಬ್ಬಳು ಅಸಂಖ್ಯಾತ ಆಸ್ತಿ ಸಂಬಂಧಿತ ಅಪರಾಧಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಳು. ಪೊಲೀಸರು ಅವಳನ್ನು ಪತ್ತೆಮಾಡುವಂತೆ ಕೋರಿ ಅವಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಆ ಚಿತ್ರಗಳನ್ನು ನೋಡಿದ ಆರೋಪಿ ಬಾಲಕಿ ತನ್ನ ಒಳ್ಳೆಯ ಚಿತ್ರ ಪೋಸ್ಟ್ ಮಾಡುವಂತೆ ಕಾಮೆಂಟ್‌ನಲ್ಲಿ ತಿಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ಕಳೆದ ವಾರ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ 18 ವರ್ಷದ ಆಮಿ ಶಾರ್ಪ್‌ಳನ್ನು ಪತ್ತೆಹಚ್ಚಲು ಅವಳ ಎರಡು ಭಾವಚಿತ್ರಗಳನ್ನು ಪ್ರದರ್ಶಿಸಿ ಪೊಲೀಸರು ಹೇಳಿಕೆ ನೀಡಿದ್ದು ವಿವಿಧ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗಿತ್ತು. ಆಸ್ಟ್ರೇಲಿಯಾ ಟಿವಿ ಚಾನಲ್ 7 ನ್ಯೂಸ್ ಸಿಡ್ನಿ ಫೇಸ್‌ಬುಕ್ ಪುಟದಲ್ಲಿ ಪೊಲೀಸರು ಆಮಿಯನ್ನು ಬೇಟೆಯಾಡುತ್ತಿರುವ ವಿಷಯ ತಿಳಿಸಲಾಗಿತ್ತು.
ಆಗ ಕಥೆ ಅನಿರೀಕ್ಷಿತ ತಿರುವು ತೆಗೆದುಕೊಂಡು ಈ ಪೋಸ್ಟ್‌ಗೆ ಮೊದಲಿಗೆ ಆಮಿಯೇ ಕಾಮೆಂಟ್ ಮಾಡಿ ಈ ಫೋಟೊ ನೀವು ದಯವಿಟ್ಟು ಬಳಸುತ್ತೀರಾ, ಧನ್ಯವಾದ, ನಿಮ್ಮವಳು, ಆಮಿ ಶಾರ್ಪ್ ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಳು.