Select Your Language

Notifications

webdunia
webdunia
webdunia
webdunia

ಆಕೆಗೆ 36, ಇತನಿಗೆ 24, ಮನೆಗೆ ಬಾ ಅಂದ್ಳು...ಮುಂದೇನಾಯ್ತು ಗೊತ್ತಾ?

ಆಕೆಗೆ 36, ಇತನಿಗೆ 24, ಮನೆಗೆ ಬಾ ಅಂದ್ಳು...ಮುಂದೇನಾಯ್ತು ಗೊತ್ತಾ?
ರಾಮನಗರ , ಬುಧವಾರ, 31 ಆಗಸ್ಟ್ 2016 (16:42 IST)
ಜಿಲ್ಲೆಯ ಮಾಗಡಿ ತಾಲೂಕಿನ ಕುದುರು ಗ್ರಾಮದಲ್ಲಿ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿದ ಯುವಕ ತಾನು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
 
ಹತ್ಯೆಯಾದ 36 ವರ್ಷದ ವಿವಾಹಿತ ಮಹಿಳೆ ಮೊದಲ ಪತಿಯನ್ನು ತೊರೆದು ಇಬ್ಬರು ಮಕ್ಕಳೊಂದಿಗೆ ಕುದುರು ಗ್ರಾಮದಲ್ಲಿರುವ ಕುದುರಮ್ಮ ದೇವಾಲಯದ ಹತ್ತಿರವಿರುವ ವಾಸಿಸುತ್ತಿದ್ದಳು ಎನ್ನಲಾಗಿದೆ.
 
ಗ್ರಾಮದಲ್ಲಿಯೇ ವಾಸಿಸುತ್ತಿದ್ದ 26 ವರ್ಷದ ಯುವಕನೊಂದಿಗೆ ಮಹಿಳೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಆದರೆ, ಯುವಕನಿಗೂ ಕೈ ಕೊಟ್ಟು ಮತ್ತೊಬ್ಬನೊಂದಿಗೆ ಅನೈತಿಕ ಸಂಬಂಧ ಬೆಳೆಸಿರುವುದು ಬಹಿರಂಗವಾಗಿದೆ.
 
ಇದರಿಂದ ಆಕ್ರೋಶಗೊಂಡ ಯುವಕ ಮಹಿಳೆಯನ್ನು ಹತ್ಯೆಗೈದು ಆಕೆಯ ಸೀರೆಯಿಂದಲೇ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಟ ದರ್ಶನ್ ಮನೆ ತೆರವು: ಯೂ-ಟರ್ನ್ ಹೊಡೆದ ಸರಕಾರ