Select Your Language

Notifications

webdunia
webdunia
webdunia
webdunia

ಬಂಧನವಾದಷ್ಟೇ ವೇಗವಾಗಿ ಜಾಮೀನು ಪಡೆದ ಮಲ್ಯ

ಬಂಧನವಾದಷ್ಟೇ ವೇಗವಾಗಿ ಜಾಮೀನು ಪಡೆದ ಮಲ್ಯ
ಲಂಡನ್ , ಮಂಗಳವಾರ, 18 ಏಪ್ರಿಲ್ 2017 (17:10 IST)
ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರಿಂದ ಬಮಧನಕ್ಕೊಳಗಾಗಿದ್ದ ಉದ್ಯಮಿ ವಿಜಯ್ ಮಲ್ಯ, ಬಂಧನವಾದ ಕೇವಲ ಮೂರೇ ಗಂಟೆಯಲ್ಲಿ ಜಾಮೀನು ಪಡೆದಿದ್ದಾರೆ. ಭಾರತದ ಜೊತೆಗಿನ ಹಸ್ತಾಂತರ ಒಪ್ಪಂದಕ್ಕೆ ಅನುಗುಣವಾಗಿ ವಾರೆಂಟ್ ಪಡೆದಿದ್ದ ಲಂಡನ್ ಅಧಿಕಾರಿಗಳು ವಿಜಯ್ ಮಲ್ಯನನ್ನ ಬಂಧಿಸಿ ವೆಸ್ಟ್ ಮಿನಿಸ್ಟರ್ ಕೋರ್ಟ್`ಗೆ ಹಾಜರುಪಡಿಸಲಾಗಿತ್ತು.
 

ಇದೀಗ, ವಿಜಯ್ ಮಲ್ಯ ಅರ್ಜಿ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಷರತ್ತುಬದ್ಧ ಜಾಮಿನು ನೀಡಿದ್ದಾರೆ. ಇದರಿಂದಾಗಿ, ತಾತ್ಕಾಲಿಕವಾಗಿ ವಿಜಯ್ ಮಲ್ಯ ಗಡೀಪಾರು ಭೀತಿಯಿಂದ ತಪ್ಪಿಸಿಕೊಂಡಿದ್ದಾರೆ. ಆದರೆ, ಭಾರತ ಸರ್ಕಾರ ಕೋರ್ಟ್`ಗೆ ಸೂಕ್ತ ಸಾಕ್ಷ್ಯಾಧಾರಗಳನ್ನ ಸಲ್ಲಿಸಿದ ಬಳಿಕ ಮಲ್ಯಗೆ ಗಡೀಪಾರಾಗುವ ಸಾಧ್ಯತೆ ಇದೆ.

ಈ ಕುರಿತು, ಟ್ವಿಟ್ ಮಾಡಿರುವ ವಿಜಯ್ ಮಲ್ಯ, ೆಂದಿನಂತೆ ಭಾರತೀಯ ಮಾಧ್ಯಮಗಳು ಸುಮ್ಮನೆ ಹೈಪ್ ಮಾಡಿವೆ. ನಿರೀಕ್ಷೆಯಂತೆ ಇಂದಿನಿಂದ ವಿಚಾರಣೆ ಆರಂಭವಾಗಿದೆಯಷ್ಟೇ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಲಂಡನ್ನಿನಲ್ಲಿ ಉದ್ಯಮಿ ವಿಜಯ್ ಮಲ್ಯ ಬಂಧನ