Select Your Language

Notifications

webdunia
webdunia
webdunia
webdunia

ಲಂಡನ್ನಿನಲ್ಲಿ ಉದ್ಯಮಿ ವಿಜಯ್ ಮಲ್ಯ ಬಂಧನ

ಲಂಡನ್ನಿನಲ್ಲಿ ಉದ್ಯಮಿ ವಿಜಯ್ ಮಲ್ಯ ಬಂಧನ
ಲಂಡನ್ , ಮಂಗಳವಾರ, 18 ಏಪ್ರಿಲ್ 2017 (15:37 IST)
9 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿ ಲಂಡನ್ನಿನಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯ ಅವರನ್ನ ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ವೆಸ್ಟ್ ಮಿನಿಸ್ಟರ್ ಕೋರ್ಟ್`ಗೆ ಹಾಜರುಪಡಿಸಿದ ಬಳಿಕ ಕಾನೂನು ಪ್ರಕ್ರಿಯೆಗಳನ್ನ ಮುಗಿಸಿ ಭಾರತಕ್ಕೆ ಹಸ್ತಾಂತರಿಸಲಾಗುತ್ತೆ.

ವಿಜಯ್ ಮಲ್ಯ ವಿರುದ್ಧ ಮುಂಬೈ ಮತ್ತು ದೆಹಲಿ ಕೋರ್ಟ್`ಗಳಿಂದ ಜಾಮೀನು ರಹಿತ ವಾರೆಮಟ್ ಜಾರಿಯಾಗಿತ್ತು. ಹಲವು ಬಾರಿ ಸಮನ್ಸ್ ನೀಡಿದ್ದರೂ ಮಲ್ಯ ಕ್ಯಾರೆ ಎಂದಿರಲಿಲ್ಲ. ಲಂಡನ್ನಿನಲ್ಲಿ ರಾಜಾರೋಶವಾಗಿ ಓಡಾಡುತ್ತಿದ್ದ ಮಲ್ಯ ಒಂದು ರೀತಿ ಭಾರತಕ್ಕೆ ಸವಾಲಾಗಿದ್ದ. ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆಗಳನ್ನ ಹರಿಬಿಡುತ್ತಿದ್ದ. , ಬ್ಯಾಂಕ್`ಗಳಿಗೆ ಸಾಲ ಮರುಪಾವತಿಸದೆ ವಂಚನೆ, ಅಕ್ರಮ ಹಣ ಸಾಗಣೆ ಸೇರಿದಂತೆ ಹತ್ತು ಕೇಸ್`ಗಳು ಮಲ್ಯ ವಿರುದ್ಧ ದಾಖಲಾಗಿವೆ.

ವಿಜಯ್ ಮಲ್ಯ ಬಂಧನ ಕುರಿತಂತೆ ಇತ್ತೀಚೆಗೆ ಭಾರತ ಸರ್ಕಾರ ಬ್ರಿಟನ್ ಜೊತೆ ಮಾತುಕತೆ ನಡೆಸಿ ಮನವಿ  ಮಾಡಿತ್ತು. ಭಾರತದ ಮನವಿಗೆ ಸ್ಪಂದಿಸಿರುವ ಬ್ರಿಟನ್ ಸರ್ಕಾರ ಇದೀಗ ಬಂಧಿಸಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಮುಖಂಡನ ಮಗನೆಂದು ಯುವತಿಯ ಮೇಲೆ ಅತ್ಯಾಚಾರ