Select Your Language

Notifications

webdunia
webdunia
webdunia
webdunia

ತಿಗಣೆ ಕೊಲ್ಲಲು ಮಹಿಳೆ ಮಾಡಿದ ಎಡವಟ್ಟಿನಿಂದ ಅಪಾರ್ಟ್ ಮೆಂಟ್ ಗೆ ಬಿತ್ತು ಬೆಂಕಿ

ತಿಗಣೆ
ನ್ಯೂಯಾರ್ಕ್ , ಶನಿವಾರ, 29 ಜುಲೈ 2017 (15:21 IST)
ಹ್ಯೂಸ್ಟನ್: ತಿಗಣೆ ಕಾಟ ತಾಳಲಾರದೆ ಮಹಿಳೆಯೊಬ್ಬರು ಮನೆಯಲ್ಲಿದ್ದ ತಿಗಣೆಯನ್ನು ಲೈಟರ್ ನಿಂದ ಕೊಲ್ಲಲು ಲೈಟರ್ ನಿಂದ ಬೆಂಕಿ ಹಚ್ಚಿದ ಪರಿಣಾಮ ಇಡೀ ಆಪಾರ್ಟ್ ಮೆಂಟ್ ಗೆ ಬೆಂಕಿ ವ್ಯಾಪಿಸಿದ ಘಟನೆ ಅಮೆರಿಕದ ಹ್ಯೂಸ್ಟನ್ ನಲ್ಲಿ ನಡೆದಿದೆ.
 
ಇಲ್ಲಿನ ಕ್ಯಾನ್ಸಾಸ್ ನಲ್ಲಿರುವ ಟೊಪೆಕಾ ಪ್ರದೇಶದ ಆಪಾರ್ಟ್ ಮೆಂಟ್ ನ ನಿವಾಸಿ ಕಾರ್ಲೆಸ್ ಮತ್ತು ಆಕೆಯ ಪುತ್ರಿ ತಮ್ಮ ಬೆಡ್ ರೂಮಿನಲ್ಲಿದ್ದ ಬೆಡ್ ನಲ್ಲಿ ಅವಿತಿದ್ದ ತಿಗಣೆಗಳನ್ನು ಹುಡುಕಿ ಕೊಲ್ಲುತ್ತಿದ್ದರಂತೆ. ಈ ವೇಳೆ ಬೆಡ್ ನ ಅಡಿಯಲ್ಲಿರುವ ತಿಗಣೆಗಳನ್ನು ಹುಡುಕುತ್ತಿದ್ದಾಗ ಮಧ್ಯಮ ಗಾತ್ರದ ದೊಡ್ಡ ತಿಗಣೆಯೊಂದು ಸಿಕ್ಕಿದೆ. ಇದನ್ನು ಲೈಟರ್ ನಿಂದ ಸುಟ್ಟು ಕೊಲ್ಲುವಂತೆ ಕಾರ್ಲೆಸ್ ತನ್ನ ಮಗಳಿಗೆ ಸೂಚಿಸಿದ್ದಾಳೆ. ಅದರಂತೆ ಮಗಳು ಲೈಟರ್ ಅನ್ನು ಹಚ್ಚಿದಾಗ ಅದರ ಕಿಡಿ ಬೆಡ್ ಗೆ ತಗುಲಿದ್ದು, ಕ್ರಮೇಣ ಬೆಂಕಿ ಉತ್ಪತ್ತಿಯಾಗಿದೆ. ಬೆಂಕಿ ನೋಡ ನೋಡುತ್ತಿದ್ದಂತೆಯೇ ಇಡೀ ಆಪಾರ್ಟ್ ಮೆಂಟ್ ಗೆ ಹಬ್ಬಿದ್ದು, ಕಾರ್ಲೆಸ್ ಳ ನಿವಾಸ ಮಾತ್ರವಲ್ಲದೇ ಅಕ್ಕಪಕ್ಕದ ನಿವಾಸಗಳಿಗೂ ಹಬ್ಬಿದೆ. 
 
ಕೂಡಲೇ ಸ್ಥಳೀಯ ಅಗ್ನಿಶಾಮಕ ದಳಕ್ಕೆ ವಿಚಾರ ಮುಟ್ಟಿಸಿದ್ದು, ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಮಹಿಳೆಯ ಯಡವಟ್ಟಿನಿಂದಾಗಿ ಸುಮಾರು  1,40,000 ಡಾಲರ್ ನಷ್ಟವಾಗಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಸಮಾಜ ಒಡೆಯುವ ಕೆಲಸ ನಮ್ಮದಲ್ಲ ಬಿಜೆಪಿಯದ್ದು: ಸಿಎಂ ವಾಗ್ದಾಳಿ