Publish Date: Wed, 08 Apr 2026 (08:43 IST)
Updated Date: Wed, 08 Apr 2026 (08:50 IST)
ವಾಷಿಂಗ್ಟನ್: ಇರಾನ್ ಮೇಲೆ ಭೀಕರ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಯ ಗಳಿಗೆಯಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು 15 ದಿನಗಳ ಕದನ ವಿರಾಮಕ್ಕೆ ಒಪ್ಪಿದ್ದಾರೆ.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್ ಮತ್ತು ಅಮೆರಿಕಾ ನಡುವೆ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು 15 ದಿನಗಳ ಕದನ ವಿರಾಮ ನೀಡಲು ಎರಡೂ ದೇಶಗಳು ಒಪ್ಪಿಗೆ ಎಂದು ತಿಳಿದುಬಂದಿದೆ. ಇದು ಜಗತ್ತಿಗೇ ಶುಭ ಸುದ್ದಿಯಾಗಿದೆ. ಆದರೆ ಇದನ್ನು ಎರಡೂ ದೇಶಗಳು ಎಷ್ಟರ ಮಟ್ಟಿಗೆ ಪಾಲಿಸುತ್ತವೆ ಎಂದು ನೋಡಬೇಕಿದೆ.
ನಿನ್ನೆ ರಾತ್ರಿ ಹೊರ್ಮುಜ್ ಜಲಸಂಧಿ ತೆರೆದು, ಸಂಧಾನಕ್ಕೆ ಒಪ್ಪದೇ ಇದ್ದರೆ ಇಡೀ ಇರಾನ್ ನಾಗರಿಕತೆಯನ್ನೇ ನಾಶ ಮಾಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು. ಹೀಗಾಗಿ ಇಡೀ ಇರಾನ್ ನಲ್ಲಿ ಪ್ರಮುಖ ಸ್ಥಳಗಳಲ್ಲಿ ನಾಗರಿಕರು ಮಾನವ ಸರಪಳಿ ನಿರ್ಮಿಸಿ ತಮ್ಮ ದೇಶದ ರಕ್ಷಣೆಗೆ ಮುಂದಾಗಿದ್ದರು.
ಇದರ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಆಸಿಫ್ ಮುನೀರ್ ಮನವಿಯ ಮೇರೆ 15 ದಿನಗಳ ವಿರಾಮಕ್ಕೆ ಅಮೆರಿಕಾ ಮತ್ತು ಇರಾನ್ ಒಪ್ಪಿಗೆ ನೀಡಿವೆ. ಅದರಂತೆ ಈಗ ಇರಾನ್ ಹೊರ್ಮುಜ್ ಜಲಸಂಧಿಯನ್ನು ತಕ್ಷಣವೇ ತೆರೆಯಲು ಒಪ್ಪಿಗೆ ನೀಡಿವೆ. ಇಸ್ರೇಲ್ ಕೂಡಾ ಕದನ ವಿರಾಮಕ್ಕೆ ಬೆಂಬಲ ಸೂಚಿಸಿದೆ ಎನ್ನಲಾಗಿದೆ.