Select Your Language

Notifications

webdunia
webdunia
webdunia
webdunia

ಇರಾನ್ ಗೆ ನರಕ ತೋರಿಸಲು ರೆಡಿಯಾದ ಅಮೆರಿಕಾ: ನಾಳೆ ಬೆಳಿಗ್ಗೆಯೊಳಗೆ ಭೀಕರ ದಾಳಿ

Iran Israel war
ಟೆಹ್ರಾನ್: ಕದನ ವಿರಾಮಕ್ಕೆ ಒಪ್ಪದ ಇರಾನ್ ವಿರುದ್ಧ ದೊಡ್ಡ ಮಟ್ಟದ ದಾಳಿಗೆ ಅಮೆರಿಕಾ ಸಿದ್ಧತೆ ನಡೆಸಿದೆ. ನಾಳೆ ಬೆಳಿಗ್ಗೆಯೊಳಗೆ ಭೀಕರ ದಾಳಿಯಾಗುವ ಭೀತಿ ಎದುರಾಗಿದೆ.

ಹೊರ್ಮುಜ್ ಜಲಸಂಧಿ ತೆರೆಯಬೇಕು, ಕದನ ವಿರಾಮಕ್ಕೆ ವಿಧಿಸಿರುವ ಷರತ್ತು ಒಪ್ಪಿಕೊಂಡು ಸುಮ್ಮನಿರಬೇಕು ಎಂದು ಡೊನಾಲ್ಡ್ ಟ್ರಂಪ್ ನಾನಾ ರೀತಿಯಲ್ಲಿ ಬೆದರಿಕೆ ಹಾಕಿದರೂ ಇರಾನ್ ಸೊಪ್ಪೇ ಹಾಕಿಲ್ಲ. ಇದು ಟ್ರಂಪ್ ಕೆರಳಿಸಿದೆ.

ಈ ಕಾರಣಕ್ಕೆ ಇರಾನ್ ಗೆ ನರಕ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಹಿಂದೆಂದೂ ಕಾಣದ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಲ್ಲದೆ ನಾಳೆ ಬೆಳಿಗ್ಗೆ 5.30 ರ ಡೆಡ್ ಲೈನ್ ನೀಡಿದ್ದರು. ಇದರ ಬೆನ್ನಲ್ಲೇ ಭೀಕರ ದಾಳಿಗೆ ಅಮೆರಿಕಾ ದಾಳಿಗೆ ಸಿದ್ಧತೆ ನಡೆಸಿದೆ.

ಟನ್ ಗಟ್ಟಲೆ ಬಾಂಬ್ ಹೊತ್ತೊಯ್ಯುವ ಸಾಮರ್ಥ್ಯವಿರುವ ಬಿ2 ಬಾಂಬರ್ ನ್ನು ರೆಡಿ ಮಾಡಿಕೊಂಡಿದೆ. ಇದರ ಮೂಲಕ ಇರಾನ್ ನ ಪ್ರಮುಖ ತಾಣಗಳ ಮೇಲೆಯೇ ದಾಳಿ ನಡೆಸಲು ಸಿದ್ಧತೆ ನಡೆಸಿದೆ. ಇತ್ತ ಇಸ್ರೇಲ್ ಕೂಡಾ ನಿರಂತರವಾಗಿ ಕ್ಷಿಪಣಿ ದಾಳಿ ನಡೆಸುತ್ತಿದೆ. ಇರಾನ್ ಕೂಡಾ ಪ್ರತಿ ದಾಳಿ ನಡೆಸುತ್ತಿದೆ. ಇದರ ನಡುವೆ ನಾಳೆ ಬೆಳಿಗ್ಗೆಯೊಳಗೆ ಭೀಕರ ದಾಳಿಯಾಗುವ ಸಾಧ್ಯತೆಯಿರುವ ಕಾರಣಕ್ಕೆ ರೈಲು ಪ್ರಯಾಣ ಮಾಡದಂತೆ ಇರಾನ್ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುರುವಾರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ: 7.10 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ