ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಕ್ರಿಯೆ ಜಾರಿಯಲ್ಲಿದ್ದು, ಇತ್ತೀಚೆಗಿನ ವರದಿ ಪ್ರಕಾರ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಎದುರು ಡೊನಾಲ್ಡ್ ಟ್ರಂಪ್ ಮುನ್ನಡೆ ಸಾದಿಸಿದ್ದಾರೆ.
ಇತ್ತೀಚೆಗಿನ ವರದಿ ಪ್ರಕಾರ ಶೇ.46.9% ವೋಟ್ ಪಡೆದು ಕಮಲಾ ಹ್ಯಾರಿಸ್ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಡೊನಾಲ್ಡ್ ಟ್ರಂಪ್ ಶೇ.51.7% ವೋಟ್ ಪಡೆದು ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಮಲಾ ಇದುವರೆಗೆ 5,06,57,095 ಮತಗಳನ್ನು ಪಡೆದುಕೊಂಡಿದ್ದಾರೆ. ಇತ್ತ ಟ್ರಂಪ್ 5,59,93,436 ಮತಗಳನ್ನು ಪಡೆದುಕೊಂಡಿದ್ದಾರೆ.
ಗೆಲುವಿಗೆ 270 ಸ್ಥಾನಗಳನ್ನು ಗೆಲ್ಲಬೇಕಿದೆ. ಈಗಿನ ವರದಿ ಪ್ರಕಾರ ಕಮಲಾ 187 ಎಲೆಕ್ಟೋರಲ್ ವೋಟ್ ಮತ್ತು ಡೊನಾಲ್ಡ್ ಟ್ರಂಪ್ 230 ಎಲೆಕ್ಟೋರಲ್ ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಇಬ್ಬರ ನಡುವೆ ಜಿದ್ದಾಜಿದ್ದಿನ ಹಣಾಹಣಿ ನಿರೀಕ್ಷಿಸಲಾಗಿತ್ತು. ಹಾಗೆ ನೋಡಿದ ಸಮೀಕ್ಷಾ ವರದಿಗಳ ಲೆಕ್ಕಾಚಾರ ಕೊಂಚ ಉಲ್ಟಾ ಆಗಿದ್ದು, ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಅವರೇ ಅಮೆರಿಕಾ ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದೆ. ಆರಂಭಿಕ ಹಂತದಲ್ಲಿ ಇಬ್ಬರೂ ಸಮಬಲ ಹೊಂದಿದ್ದರು. ಆದರೆ ಈಗ ಟ್ರಂಪ್ ಮುನ್ನಡೆಯಲ್ಲಿದ್ದಾರೆ. ವಿಶ್ವದ ದೊಡ್ಡಣ್ಣನ ಚುಕ್ಕಾಣಿ ಹಿಡಿಯುವವರು ಯಾರು ಎಂದು ಇಡೀ ಜಗತ್ತೇ ಕುತೂಹಲದಿಂದ ಎದಿರು ನೋಡುತ್ತಿದೆ.