Select Your Language

Notifications

webdunia
webdunia
webdunia
webdunia

ಡೊನಾಲ್ಡ್ ಟ್ರಂಪ್ ರನ್ನು ಕಾಪಾಡಿದ್ದು ಪುರಿ ಜಗನ್ನಾಥ ಮಂದಿರ: ವೈರಲ್ ಆಯ್ತು ಹಳೆ ವಿಚಾರ

Donald Trumph

Krishnaveni K

ಷಿಕಾಗೊ , ಮಂಗಳವಾರ, 16 ಜುಲೈ 2024 (10:03 IST)
ಷಿಕಾಗೊ: ಮೊನ್ನೆ ಚುನಾವಣೆ ಪ್ರಚಾರ ವೇಳೆ ಆಗಂತುಕನಿಂದ ಗುಂಡಿನ ದಾಳಿಗೊಳಗಾದರೂ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬದುಕುಳಿಯಲು ಪುರಿಯ ಜಗನ್ನಾಥನೇ ಕಾರಣ ಎಂಬ ವಿಚಾರ ಈಗ ವೈರಲ್ ಆಗಿದೆ. ಇದಕ್ಕೆ ಕಾರಣವೂ ಇದೆ.

ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದ ದಿನವೇ ಪುರಿಯಲ್ಲಿ ಜಗನ್ನಾಥ ಮಂದಿರದ ರತ್ನ ಭಂಡಾರವನ್ನು ಧಾರ್ಮಿಕ ವಿಧಿ ವಿಧಾನದ ಬಳಿಕ ತೆರೆಯಲಾಗಿತ್ತು. ಅದೇ ದಿನ ಟ್ರಂಪ್ ಕೂದಲೆಳೆಯಲ್ಲಿ ಪ್ರಾಣ ಉಳಿಸಿಕೊಂಡಿದ್ದರು. ಅಂದು ಟ್ರಂಪ್ ಪ್ರಾಣ ಉಳಿಸಿದ್ದು ಸ್ವತಃ ಪುರಿ ಜಗನ್ನಾಥ ಎನ್ನಲಾಗಿದೆ. ಇದನ್ನು ಸ್ವತಃ ಇಸ್ಕಾನ್ ಸಂಸ್ಥೆಯೇ ಹೇಳಿದೆ. ಇದಕ್ಕೆ ಕಾರಣವನ್ನೂ ನೀಡಿದೆ.

48 ವರ್ಷಗಳ ಹಿಂದೆ ನ್ಯೂಯಾರ್ಕ್ ನಲ್ಲಿ ಪುರಿ ಜಗನ್ನಾಥನ ರಥಯಾತ್ರೆ ನಡೆದಿದ್ದಾಗ ಆಗ ಯುವ ಉದ್ಯಮಿಯಾಗಿದ್ದ ಟ್ರಂಪ್ ಭಕ್ತರಿಗೆ ಸಾಕಷ್ಟು ನೆರವಾಗಿದ್ದರು. ಅದೇ ಪುಣ್ಯ ಟ್ರಂಪ್ ರನ್ನು ಇಂದು ಕಾಪಾಡಿದೆ ಎಂದು ಇಸ್ಕಾನ್ ಹೇಳಿದೆ. ಅಂದು ಜಗನ್ನಾಥನ ಭಕ್ತರಿಗೆ ಟ್ರಂಪ್ ಮಾಡಿದ್ದ ನೆರವಿಗೆ ಇಂದು ಜಗನ್ನಾಥನೇ ಪ್ರತಿಫಲ ನೀಡಿದ್ದಾನೆ ಎಂದು ಇಸ್ಕಾನ್ ಹೇಳಿದೆ.

ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಟ್ರಂಪ್ ಮೂಲತಃ ಕ್ರಿಶ್ಚಿಯನ್ ಧರ್ಮೀಯರಾಗಿದ್ದರೂ ಹಿಂದೂ ದೇವರ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಅಂದು ಶ್ರೀಮಂತ ಉದ್ಯಮಿಯಾಗಿದ್ದ ಟ್ರಂಪ್ ಜಗನ್ನಾಥನ ಭಕ್ತರಿಗೆ ಮಾಡಿದ್ದ ಸೇವೆಯ ಪ್ರತಿಫಲವೇ ಇಂದು ಅವರು ಪಡೆದಿದ್ದಾರೆ ಎಂಬ ಪೋಸ್ಟ್ ಗಳು ವೈರಲ್ ಆಗಿವೆ. ಮೊನ್ನೆ ನಡೆದ ಗುಂಡಿನ ದಾಳಿಯಲ್ಲಿ ಪವಾಡಸದೃಶವಾಗಿ ಟ್ರಂಪ್ ಬದುಕುಳಿದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರರ ಜೊತೆ ಚಕಮಕಿ: ಓರ್ವ ಸೇನಾಧಿಕಾರಿ ಸೇರಿದಂತೆ ಹುತಾತ್ಮರಾದ ನಾಲ್ವರು ಸೈನಿಕರು