ಅಮೆರಿಕಾ: ಮಹಿಳೆಯರ ಬಾಕ್ಸಿಂಗ್‌ನಲ್ಲಿ ಪುರುಷರು ಹುಡುಗಿ ಎಂದು ಸ್ಪರ್ಧಿಸಬಹುದು, ಆದರೆ ಕುಸ್ತಿಪಟು ಒಬ್ಬರು ಕೇವಲ 100ಗ್ರಾಂ ಹೆಚ್ಚು ತೂಕ ಇದ್ದಿದ್ದಕ್ಕೆ ಅವರನ್ನು ಅನರ್ಹಗೊಳಿಸಿರುವುದು ಎಂದು ಸರಿ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ಹೊರಹಾಕಿದ್ದಾರೆ.
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ 100 ಗ್ರಾಂ ತೂಕ ಹೆಚ್ಚಿರುವುದಕ್ಕೆ 50 ಕೆಜಿ ಮಹಿಳೆಯರ ಕುಸ್ತಿ ಸ್ಪರ್ಧೆಯಿಂದ ಭಾರತದ ಕ್ರೀಡಾಪಟು ವಿನೇಶ್ ಫೋಗಟ್ ಅವರನ್ನು ಹೊರಗಿಡಲಾಯಿತು. ಇದಕ್ಕೆ ಭಾರತದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇನ್ನೂ ವಿನೇಶ್ ಅವರಿಗೆ ಅನ್ಯಾಯವಾಗಿದೆ ಎಂದು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಅಕ್ರೋಶ ಹೊರಹಾಕಿದ್ದಾರೆ.
ಡೊನಾಲ್ಡ್ ಟ್ರಂಪ್ ಪೋಸ್ಟ್‌ನಲ್ಲಿ ಏನಿದೆ:
ಅತ್ಯಂತ ಕೆಟ್ಟ ಒಲಿಂಪಿಕ್!
ಮಹಿಳೆಯರ ಬಾಕ್ಸಿಂಗ್‌ನಲ್ಲಿ ಪುರುಷರಿಗೆ ಹೋರಾಡಲು ಅವಕಾಶವಿದೆ ಮತ್ತು ಇಂದು ಕುಸ್ತಿಪಟು ಕೇವಲ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕಾಗಿ ಅನರ್ಹಗೊಳ್ಳುತ್ತಾನೆ.
ಇನ್ನೂ ವಿನೇಶ್ ಅವರಿಗೆ ದೇಶದಾದ್ಯಂತ ಬಾರೀ ಬೆಂಬಲ ವ್ಯಕ್ತವಾಗುತ್ತಿದೆ. ನೀವು ನಮ್ಮ ದೇಶಕ್ಕೆ ಹೆಮ್ಮೆ ತಂದಿದ್ದೀರಿ, ನಮ್ಮ ಚಾಂಪಿಯನ್ ಎಂದು ಗಣ್ಯರು ಅವರಿಗೆ ಧೈರ್ಯ ತುಂಬುತ್ತಿದ್ದಾರೆ.