ಇರಾನ್‌ ಮೇಲೆ ಅಮೆರಿಕಾ ಏರ್‌ಸ್ಟ್ರೇಕ್: ಮತ್ತಷ್ಟು ದಾಳಿಯ ಎಚ್ಚರಿಕೆ ನೀಡಿದ ಡೋನಾಲ್ಡ್‌ ಟ್ರಂಪ್‌

Sampriya
ಭಾನುವಾರ, 22 ಜೂನ್ 2025 (10:41 IST)
Photo Credit X
ವಾಷಿಂಗ್ಟನ್: ಅಮೆರಿಕಾವು ಇರಾನ್‌ನ ಮೂರು ಅಣು ಕೇಂದ್ರಗಳ ಮೇಲೆ ಏರ್‌ಸ್ಟ್ರೈಕ್‌ ನಡೆಸಿದ ಬೆನ್ನಲ್ಲೇ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ್ದು, ಇರಾನ್‌ಗೆ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. 

ಇರಾನ್‌ನಲ್ಲಿರುವ ಮೂರು ಅಣು ಕೇಂದ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಒಂದು ವೇಳೆ ಇರಾನ್ ಪ್ರತಿರೋಧ ಒಡ್ಡಿದರೆ ಮತ್ತಷ್ಟು ದಾಳಿ ನಡೆಸುತ್ತೇವೆ. ಇರಾನ್‌ನ ಪರಮಾಣು ಸಾಮರ್ಥ್ಯವನ್ನು ನಾಶಪಡಿಸುವುದು ಹಾಗೂ ಭಯೋತ್ಪಾದನಾ ಪ್ರಾಯೋಜಿತ ರಾಷ್ಟ್ರದಿಂದ ಎದುರಾಗುವ ಭೀತಿಯಿಂದ ಜಗತ್ತನ್ನು ರಕ್ಷಿಸುವುದು ನಮ್ಮ ಗುರಿಯಾಗಿತ್ತು ಎಂದು ಶ್ವೇತಭವನದಲ್ಲಿ ಅಮೆರಿಕದ ಜನರನ್ನು ಉದ್ದೇಶಿಸಿ ಟ್ರಂಪ್  ಮಾತನಾಡಿದರು.

ಇರಾನ್‌ನ ಮೂರು ಪ್ರಮುಖ ಅಣು ಕೇಂದ್ರಗಳಾದ ಫೋರ್ಡೊ, ನತಾನ್ಜ್ ಮತ್ತು ಎಸ್ಪಹಾನ್ ಮೇಲೆ ಅಮೆರಿಕದ ಮಿಲಿಟರಿ ನಿಖರ ದಾಳಿ ನಡೆಸಿದೆ. ದಾಳಿಯಲ್ಲಿ ಹಾನಿಯ ವಿವರ ಇನ್ನಷ್ಟೇ ಸಿಗಬೇಕಿದೆ. ಶನಿವಾರ ರಾತ್ರಿ, ನಾವು ನಡೆಸಿರುವ ದಾಳಿಯು ಅದ್ಭುತ ಯಶಸ್ಸನ್ನು ಕಂಡಿದೆ ಎಂದು ಜಗತ್ತಿಗೆ ಹೇಳಬಲ್ಲೆ. ಇರಾನ್‌ನ ಪರಮಾಣು ಕೇಂದ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಧ್ಯಪ್ರಾಚ್ಯವನ್ನು ಬೆದರಿಸುವ ಇರಾನ್‌ನಲ್ಲಿ ಈಗ ಶಾಂತಿ ಸ್ಥಾಪನೆಯಾಗಬೇಕು. ಅದನ್ನು ಮಾಡದಿದ್ದರೆ ಭವಿಷ್ಯದ ದಾಳಿಗಳು ಇನ್ನಷ್ಟು ಮಾರಕವಾಗಿರುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.

ಜಗತ್ತಿನ ನಂಬರ್ ಒನ್ ಭಯೋತ್ಪಾದಕ ರಾಷ್ಟ್ರದ ಪರಮಾಣು ಬಾಂಬ್ ತಯಾರಿಕೆಯನ್ನು ತಡೆಯುವುದು ಮುಖ್ಯವಾಗಿತ್ತು. ಈ ನಿಟಿನಲ್ಲಿ ಅಮೆರಿಕಾ ದಾಳಿ ಮಾಡಿದೆ. ಇರಾನ್ ಮೇಲಿನ ದಾಳಿ ಭರ್ಜರಿ ಯಶಸ್ಸನ್ನು ಕಂಡಿದೆ. ಇದು ಜಾಗತಿಕ ಭದ್ರತೆಗೆ ಇದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ. 

40 ವರ್ಷಗಳಿಂದ, ಇರಾನ್ ದೇಶವು ಇಸ್ರೇಲ್‌ಗೆ ಸಾವು, ಅಮೆರಿಕಕ್ಕೆ ಸಾವು ಎಂದು ಹೇಳುತ್ತಾ ಬಂದಿದೆ. ಅವರು ನಮ್ಮ ಜನರನ್ನು ಕೊಲ್ಲುತ್ತಿದ್ದಾರೆ, ಎಷ್ಟೋ ಜನರನ್ನು ಅವರ ಜನರಲ್ ಖಾಸೆಮ್ ಸೊಲೈಮಾನಿ ಕೊಂದರು. ಇನ್ನು ಮುಂದೆ ಹೀಗಾಗಲು ಬಿಡುವುದಿಲ್ಲ. ಮುಂದುವರಿಯುವುದೂ ಇಲ್ಲ ಎಂದು ತಿಳಿಸಿದ್ದಾರೆ. 

 <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

‌‌ಸುಧಾಮೂರ್ತಿ ಡ್ಯಾನ್ಸ್‌ ಸ್ಟೆಪ್ಸ್‌ಗೆ ಡೋಲು ಬಾರಿಸುವವರೇ ಶಾಕ್‌, Viral Video

ಮೇಕೆದಾಟು ಯೋಜನೆ, ಇದು ಬೆಂಗಳೂರಿಗರ ಗೆಲುವು: ಡಿಸಿಎಂ ಡಿಕೆ ಶಿವಕುಮಾರ್

ಅಬ್ಬಬ್ಬಾ ಖತರ್ನಾಕ್ ಡಾ ಶಾಹೀನ್ ಕತೆ ಒಂದಾ ಎರಡಾ

Delhi Blast: ಕೃತ್ಯಕ್ಕೂ ಮುನ್ನಾ ಬರೋಬ್ಬರಿ ₹26ಲಕ್ಷ ಸಂಗ್ರಹಿಸಿದ್ದ ಗ್ಯಾಂಗ್

ಚಾಚಾ ನೆಹರೂ ಜನ್ಮದಿನದಂದೇ ರಾಹುಲ್ ಗಾಂಧಿಗೆ ಸಿಗುತ್ತಾ ಬಿಹಾರದ ಗಿಫ್ಟ್

ಮುಂದಿನ ಸುದ್ದಿ
Show comments