ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಫ್ರೀಜರ್ ನಲ್ಲಿಟ್ಟ ಪಾಪಿ ಚಿಕ್ಕಪ್ಪ!

ಶನಿವಾರ, 8 ಸೆಪ್ಟಂಬರ್ 2018 (14:18 IST)
ಲಂಡನ್ : 19 ವರ್ಷದ ಯುವತಿಯೊಬ್ಬಳ ಮೇಲೆ ಆಕೆಯ ಚಿಕ್ಕಪ್ಪನೇ ಅತ್ಯಾಚಾರ ಎಸಗಿ ಕೊಲೆ ಮಾಡಿ ಫ್ರೀಜರ್ ನಲ್ಲಿ ಅಡಗಿಸಿಟ್ಟ ಘಟನೆ ನಡೆದಿರುವುದಾಗಿ ವರದಿಯಾಗಿದೆ.


19 ವರ್ಷದ ಸೆಲೀನ್ ದೂಖ್ರಾನ್ನ ಎಂಬ ಯುವತಿಯ ಮೃತ ದೇಹವು ಕಳೆದ ಜುಲೈಯಲ್ಲಿ ಮನೆಯೊಂದರ ಫ್ರೀಜರ್ ನಲ್ಲಿ ಪತ್ತೆಯಾಗಿದೆ. ಆಕೆಯನ್ನು ಆಕೆಯ 33 ವರ್ಷ ವಯಸ್ಸಿನ ಚಿಕ್ಕಪ್ಪ ಮುಜಾಹಿದ್ ಆರ್ಶಿದ್  ಎಂಬಾತ ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.


ಆಕೆ ತನಗೆ ಸಿಗದ ಮೇಲೆ ಆಕೆ ಯಾರಿಗೂ ಸಿಗಬಾರದು ಎಂಬ ಗೀಳನ್ನು ಹೊಂದಿರುವ ಚಿಕ್ಕಪ್ಪ  ತನ್ನ ಸಹೋದ್ಯೋಗಿ  ವಿನ್ಸೆಂಟ್ ಎಂಬಾತನೊಂದಿಗೆ ಸೇರಿ ಲಂಡನ್ ನಲ್ಲಿರುವ ಯುವತಿಯ ಮನೆಯಿಂದ ಆಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ನಂತರ ಆಕೆಯ ಕೊರಳನ್ನು ಕತ್ತರಿಸಿ ಕೊಲೆಮಾಡಿ ಆಕೆಯ ದೇಹವನ್ನು ಫ್ರೀಜರ್ ನಲ್ಲಿ ಅಡಗಿಸಿಟ್ಟಿದ್ದಾನೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಡುರಸ್ತೆಯಲ್ಲಿ ಬೆತ್ತಲೆಯಾಗಿ ನಿಂತ ಕಾಮುಕ ಅರೆಸ್ಟ್