ಕೀವ್ : ರಷ್ಯಾ, ಉಕ್ರೇನ್ ವಿರುದ್ಧ ಯುದ್ಧ ಸಾರಿ ಐದು ದಿನಗಳು ಕಳೆದಿದೆ.
ಇದೀಗ ರಷ್ಯಾ ಮತ್ತು ಉಕ್ರೇನ್ ಸಂಧಾನಕ್ಕೆ ಮುಂದಾಗಿದ್ದು, ರಷ್ಯಾ ಕೂಡಲೇ ಕದನ ವಿರಾಮ ಘೋಷಿಸಿ ಸೇನಾ ಪಡೆಗಳನ್ನು ಹಿಂಪಡೆಯಲಿ ಎಂದು ಉಕ್ರೇನ್ ಷರತ್ತು ವಿಧಿಸಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ದಿನಗಳಿಂದ ವಿಶ್ವದ ಇತರ ರಾಷ್ಟ್ರಗಳು ವಿರೋಧಿಸುತ್ತಿದೆ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಅಭಿಪ್ರಾಯಪಟ್ಟಿದೆ.
ಈ ನಡುವೆ ಎರಡು ದೇಶಗಳು ಕೂಡ ಸಂಧಾನಕ್ಕೆ ಮುಂದಾಗಿದ್ದು, ಬೆಲಾರಸ್ನ ಗಡಿ ಪ್ರದೇಶದಲ್ಲಿ ಸಂಧಾನ ಸಭೆಗಾಗಿ ಉಭಯ ದೇಶಗಳ ಪ್ರಮುಖರು ಸೇರಿದ್ದಾರೆ.