ಆಂಧ್ರಪ್ರದೇಶ: ಸಪ್ತರ್ಷಿ ಹಾಗೂ ರಾಜರ್ಷಿ ಆಂಧ್ರಪ್ರದೇಶದ ಎಸ್ಆರ್ಎಂ ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಮೊದಲ ಬ್ಯಾಚ್ ಆಗಿದೆ. ಸಾಮಾನ್ಯವಾಗಿ ಮೊದಲ ಬ್ಯಾಚ್ಗೆ ವಾರ್ಷಿಕ ಪ್ಯಾಕೇಜ್ 7 ಲಕ್ಷ ಇರುತ್ತದೆ. ಆದರೆ ಈ ಅವಳಿ ಸಹೋದರರು ಅತ್ಯಧಿಕ ಪ್ಯಾಕೇಜ್ ಪಡೆದಿದ್ದಾರೆ.
ಅವಳಿ ಸಹೋದರರಿಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದು, ಉತ್ತಮ ಸಂಬಳದ ಪ್ಯಾಕೇಜನ್ನೂ ಸಹ ಪಡೆದಿದ್ದಾರೆ. ಪಶ್ಚಿಮ ಬಂಗಾಳದ ಬುರ್ದ್ವಾನ್ನ ಸಪ್ತರ್ಷಿ ಮತ್ತು ರಾಜರ್ಷಿ ಮಜುಂದಾರ್ ಅವಳಿ ಸಹೋದರರು. ಜಪಾನ್ನ ಪಿವಿಪಿ ಇಂಕ್ ಕಂಪನಿಯಲ್ಲಿ ಕೆಲಸ ಪಡೆದಿದ್ದಾರೆ. ಇದು ಗೂಗಲ್ ಜಪಾನ್ನ ಕಾರ್ಯತಂತ್ರದ ಪಾಲುದಾರ ಆಗಿದೆ. ಇಬ್ಬರೂ ವಾರ್ಷಿಕ 50 ಲಕ್ಷ ಸಂಬಳದ ಪ್ಯಾಕೇಜ್ ಪಡೆದಿದ್ದಾರೆ. ಇಬ್ಬರೂ ಆಂಧ್ರಪ್ರದೇಶದ ಎಸ್ಆರ್ಎಂ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ. ಕ್ಯಾಂಪಸ್ ಪ್ಲೇಸ್ಮೆಂಟ್ನಲ್ಲಿ ಈ ಇಬ್ಬರೂ ಅವಳಿಗಳು ಆಯ್ಕೆಯಾಗಿದ್ದಾರೆ. ಆ ಮೂಲಕ ಆಂಧ್ರಪ್ರದೇಶದಿಂದ ಪದವಿ ಪಡೆದ ವಿದ್ಯಾರ್ಥಿಗಳ ಪೈಕಿ ಇವರಿಬ್ಬರೇ ಅತೀ ಹೆಚ್ಚು ಸಂಬಳದ ಪ್ಯಾಕೇಜ್ ಪಡೆದಿರುವವರು.