Select Your Language

Notifications

webdunia
webdunia
webdunia
webdunia

ಸಂಗಾತಿಯಿಂದ ಮೋಸಕ್ಕೊಳಗಾದ ಪೆಂಗ್ವಿನ್‌; ಕರುಣಾಜನಕ ಕಥೆ

ಸಂಗಾತಿಯಿಂದ ಮೋಸಕ್ಕೊಳಗಾದ ಪೆಂಗ್ವಿನ್‌; ಕರುಣಾಜನಕ ಕಥೆ
, ಬುಧವಾರ, 9 ನವೆಂಬರ್ 2016 (10:46 IST)
ತನ್ನ ಹೆಂಡತಿ ಬೇರೆ ಗಂಡಿನೊಂದಿಗೆ ಇರೋದನ್ನ ನೋಡಿದ್ರೆ ಎಂತವರಿಗೂ ಕೆಂಡದಂತ ಕೋಪ ಬರುತ್ತೆ. ಅದೇ ರೀತಿ ಪೆಂಗ್ವಿನ್‍ವೊಂದು ತನ್ನ ಸಂಗಾತಿ ಬೇರೊಂದು ಗಂಡ ಪೆಂಗ್ವಿನ್‍ನೊಂದಿಗೆ ಇರೋದನ್ನ ನೋಡಿ ಅದರ ಜೊತೆ ಕಾಳಗಕ್ಕೆ ಬೀಳೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತನ್ನ ಸಂಗಾತಿ ಬೇರೆಯವರೊಂದಿಗೆ ತುಂಬ ಸಲಿಗೆಯಿಂದ ಇರುವುದನ್ನು ಕಂಡರೆ ಯಾರಿಗೆ ತಾನೆ ಕೋಪ ಬರುವುದಿಲ್ಲ ಹೇಳಿ. ಮನುಷ್ಯರಲ್ಲಿ ಅಷ್ಟೇ ಅಲ್ಲ ಪ್ರಾಣಿ- ಪಕ್ಷಿಗಳಲ್ಲಿ ಸಹ ಈ ಭಾವವಿರುತ್ತದೆ. ಇದನ್ನು ಪುಷ್ಟೀಕರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈವರೆಗೆ 3 ಲಕ್ಷಕ್ಕೂ ಹೆಚ್ಚು ಲೈಕ್ ಪಡೆದಿದೆ. ಜತೆಗೆ ಮೂರು ಲಕ್ಷಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. 
 
ವಿಡಿಯೋದಲ್ಲಿರುವುದೇನು?:
 
ಹೊರಗಡೆ ಹೋಗಿದ್ದ ಪೆಂಗ್ವಿನ್ ಪಕ್ಷಿಯೊಂದು ಮನೆಗೆ ಮರಳಿದಾಗ ತನ್ನ ಪತ್ನಿ ಬೇರೆಯವನ ಜತೆಗಿರುವುದನ್ನು ನೋಡುತ್ತದೆ. ಎರಡು ಗಂಡು ಪಕ್ಷಿಗಳ ನಡುವೆ ಘನಘೋರ ಕಾಳಗ ನಡೆದು, ಇಬ್ಬರ ದೇಹ ರಕ್ತಮಯವಾಗುತ್ತದೆ. ಕೊನೆಗೆ ತಮ್ಮಲ್ಲಿ ಯಾರಾದರೂ ಒಬ್ಬನನ್ನು ಆರಿಸಿಕೊಳ್ಳುವಂತೆ ಗಂಡು ಪೆಂಗ್ವಿನ್ ಪತ್ನಿ ಮುಂದೆ ಆಯ್ಕೆಯನ್ನಿಡುತ್ತದೆ. ಆದರೆ ಹೆಣ್ಣು ಪ್ರಿಯತಮನನ್ನೇ ಆಯ್ದುಕೊಳ್ಳುತ್ತದೆ. 
 
ಗಂಡು ಪೆಂಗ್ವಿನ್ ಅಲ್ಲಿಂದ ವಿಷಾದದಿಂದ ತೆರಳುವ ದೃಶ್ಯ ಯಾರ ಕಣ್ಣಲ್ಲಾದರೂ ನೀರು ತರಿಸುವಂತಿದೆ.
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಸೆಲ್ಫಿ ಹುಚ್ಚಲ್ಲಿ ಪ್ರಾಣಕ್ಕೆ ಕುತ್ತು ತಂದುಕೊಂಡ ಗೆಳೆಯರು