Publish Date: Sat, 13 Apr 2019 (10:15 IST)
Updated Date: Sat, 13 Apr 2019 (10:17 IST)
ಬೀಜಿಂಗ್ : ಪತಿಯ ಕಂಪ್ಯೂಟರ್ ಡೆಸ್ಕ್ ಟಾಪ್ ಕ್ಯಾಮೆರಾ ಆಫ್ ಆಗದ ಕಾರಣ ಪತ್ನಿಯ ಅನೈತಿಕ ಸಂಬಂಧದ ವಿಡಿಯೋ ರೆಕಾರ್ಡ್ ಆಗಿ ಅವರಿಬ್ಬರು ಬೇರೆ ಬೇರೆಯಾದ ಘಟನೆ ಚೀನಾದ ಮುಂಡಾನ್ ಜಿಹಾಂಗ್ ನಲ್ಲಿ ನಡೆದಿದೆ.
ಕಂಪ್ಯೂಟರ್ ಕ್ಯಾಮೆರಾ ಕೆಟ್ಟು ಹೋಗಿದ್ದ ಕಾರಣ ಪತಿ ಡೆಸ್ಕ್ ಟಾಪ್ ಕ್ಯಾಮೆರಾ ಆಫ್ ಮಾಡಿರಲಿಲ್ಲ. ಆ ವೇಳೆ ಪತ್ನಿ ಬೇರೆಯವರ ಜೊತೆ ಸಂಬಂಧ ಬೆಳೆಸಿದ್ದು, ಅದು ಆ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಇದನ್ನು ನೋಡಿದ ಪತಿ ಪತ್ನಿ ವೇಶ್ಯಾವಾಟಿಕೆ ವ್ಯವಹಾರ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಕಾನೂನು ಬದ್ಧವಾಗಿ ಈಗ ವಿಚ್ಛೇದನ ಪಡೆದುಕೊಂಡಿದ್ದಾನೆ.
ಆದರೆ ಪತ್ನಿ ಈ ಆರೋಪವನ್ನು ತಳ್ಳಿಹಾಕಿದ್ದು, ಈ ವಿಡಿಯೋದಲ್ಲಿ ರೆಕಾರ್ಡ್ ಆಗಿರುವ ದೃಶ್ಯ ಒಂದು ದುರ್ಘಟನೆ ಎಂದು ಹೇಳಿದ್ದಾಳೆ. ಅಲ್ಲದೇ ನನ್ನ ಪತಿ ನನ್ನ ಮೇಲೆ ದ್ವೇಷ ತೀರಿಸಿಕೊಳ್ಳಲು ಯಾವುದೋ ಸೀಕ್ರೆಟ್ ಕ್ಯಾಮೆರಾದಿಂದ ಈ ದೃಶ್ಯ ಸೆರೆ ಹಿಡಿದಿದ್ದಾನೆ ಎಂದು ಆರೋಪಿಸಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.