Daily Horoscope

Select Your Language

Notifications

webdunia
webdunia
webdunia
webdunia

New Year 2026: ಎಲ್ಲರಿಗಿಂತ ಮೊದಲೇ ಹೊಸ ವರ್ಷ ಸ್ವಾಗತಿಸಿದ ದೇಶವಿದು

New Year
Photo Credit: X
ವಿಶ್ವದ ಎಲ್ಲಾ ರಾಷ್ಟ್ರಗಳಿಗಿಂತ ಮೊದಲು ಈ ಒಂದು ಪುಟ್ಟ ದ್ವೀಪ ರಾಷ್ಟ್ರ ಹೊಸ ವರ್ಷ 2026 ರನ್ನು ಸ್ವಾಗತಿಸಿದೆ. ಭಾರತದಲ್ಲಿ ಇನ್ನೂ ಹೊಸ ವರ್ಷಾಚರಣೆಗೆ ಕೆಲವು ಗಂಟೆಗಳು ಬಾಕಿಯಿದೆ.

ಪೆಸಿಫಿಕ್ ನಲ್ಲಿರುವ ಪುಟ್ಟ ದ್ವೀಪ ಕಿರಿಬಾಟಿ ಈಗಾಗಲೇ ಹೊಸ ವರ್ಷ 2026 ಕ್ಕೆ ಕಾಲಿಟ್ಟಿದೆ. ಭಾರತೀಯ ಕಾಲಮಾನ ಪ್ರಕಾರ ಅಪರಾಹ್ನ 3.30 ಕ್ಕೆ ಅಲ್ಲಿ ಜನವರಿ 1 ಆರಂಭವಾಗಿದೆ.  ವಿಶ್ವದಲ್ಲಿ ಮೊದಲು ಹೊಸ ವರ್ಷ ಸ್ವಾಗತಿಸುವ ದ್ವೀಪ ರಾಷ್ಟ್ರವಿದು.

ಕಿರಿಬಾಟಿ ಗ್ರೀನ್ ವಿಚ್ ಸಮಯಕ್ಕಿಂತ 11 ಗಂಟೆ ಮುಂದಿದೆ. ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಇನ್ನೂ ಡಿಸೆಂಬರ್ 31 ಜಾರಿಯಲ್ಲಿದೆ. ಆದರೆ ಕಿರಿ ಬಾಟಿ ಈ ದೇಶಗಳಿಗಿಂತ ಒಂದು ದಿನ ಮುಂದಿದೆ.

ಹೀಗಾಗಿ ಇಲ್ಲಿ ಈಗಾಗಲೇ ಹೊಸ ವರ್ಷವನ್ನು ಸ್ವಾಗತಿಸಿಯಾಗಿದೆ. ಈ ದ್ವೀಪ ರಾಷ್ಟ್ರದಲ್ಲಿ ಸುಮಾರು 1.20 ಲಕ್ಷ ಜನರ ವಾಸವಿದೆ. ಇನ್ನು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮೊದಲಾದ ರಾಷ್ಟ್ರಗಳೂ ಭಾರತಕ್ಕಿಂತ ಮೊದಲೇ ಹೊಸ ವರ್ಷಕ್ಕೆ ಕಾಲಿಡುತ್ತವೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದೋರ್‌ನಲ್ಲಿ ಬೆಚ್ಚಿಬೀಳಿಸುವ ದುರಂತ: ಕಲುಷಿತ ನೀರು ಸೇವಿಸಿದ ಎಂದು ಮಂದಿ ಸಾವು