ಲಕ್ನೋ : ಬೆಂಕಿ ಅವಘಡದಿಂದ 3 ವರ್ಷದ ಬಾಲಕಿಯೊಬ್ಬಳು ಸಜೀವ ದಹನವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ನಂದಿನಿ (3) ಮೃತ ಬಾಲಕಿ. ಉತ್ತರ ಪ್ರದೇಶದ ಬಹದ್ದೂರ್ಪುರ ಗ್ರಾಮದ ರಾಂಬಾಬು ಎಂಬುವವರ ಹುಲ್ಲಿನ ಮನೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ರಾಂಬಾಬು ಅವರ ಮಗಳು ನಂದಿನಿ ಹುಲ್ಲಿನ ಛಾವಣಿಯ ಕೆಳಗೆ ಮಲಗಿದ್ದಳು.
ನೆರೆಹೊರೆಯವರು ಬೆಂಕಿ ನಂದಿಸಲು ಧಾವಿದ್ದಾರೆ. ಆದರೆ ಅಷ್ಟರಾಗಲೇ ಬೆಂಕಿಯನ್ನು ನಿಯಂತ್ರಿಸುವಷ್ಟರಲ್ಲಿ ಬಾಲಕಿ ಹಾಗೂ ಹತ್ತಿರದಲ್ಲಿ ಕಟ್ಟಿದ್ದ ಹಸು ಸುಟ್ಟು ಕರಕಲಾಗಿದೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.