Webdunia - Bharat's app for daily news and videos

Install App

ಮಿಲಿಟರಿ ಕೇಂದ್ರ ಕಚೇರಿಯೇ ಧ್ವಂಸ..!

Webdunia
ಗುರುವಾರ, 24 ಫೆಬ್ರವರಿ 2022 (15:07 IST)
ಮಾಸ್ಕೋ : ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಘೋಷಣೆ ಮಾಡಿದ್ದೇ ತಡ, ರಷ್ಯಾದ ಕ್ಷಿಪಣಿಗಳು ಬೆಂಕಿಯ ಮಳೆಯನ್ನೇ ಸುರಿಸುತ್ತಿವೆ.

ಲೆಕ್ಕವಿಲ್ಲದಷ್ಟು ಕ್ಷಿಪಣಿಗಳು ಉಕ್ರೇನ್ ನೆಲಕ್ಕೆ ಅಪ್ಪಳಿಸಿದ್ದು, ಅಪಾರ ಸಾವು ನೋವು ಸಂಭವಿಸಿದೆ.

ಈವರೆಗೆ ಸಿಕ್ಕ ಲೆಕ್ಕದ ಪ್ರಕಾರ 40ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಹಾಗೂ 10 ಹೆಚ್ಚು ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಇದು ರಷ್ಯಾ ಸೇನೆಯ ಕಾರ್ಯಾಚರಣೆ ಆರಂಭವಾದ ಒಂದೇ ಗಂಟೆಯಲ್ಲಿ ಆದ ಜೀವ ಹಾನಿಯ ಲೆಕ್ಕಾಚಾರ..!

ಇನ್ನೊಂದೆಡೆ ಉಕ್ರೇನ್ ಕೂಡಾ ತಾನು ರಷ್ಯಾದ 50ಕ್ಕೂ ಹೆಚ್ಚು ‘ಬಂಡುಕೋರ’ರನ್ನು ಹೊಡೆದುರುಳಿಸಿರೋದಾಗಿ ಹೇಳಿಕೊಂಡಿದೆ. ಉಕ್ರೇನ್ ಗಡಿಯಾದ್ಯಂತ ಎಲ್ಲ ದಿಕ್ಕುಗಳಿಂದಲೂ ರಷ್ಯಾ ಸೇನೆ ಆಕ್ರಮಣ ನಡೆಸುತ್ತಿದ್ದು, ಭೂ ಸೇನೆ ಇಡೀ ಉಕ್ರೇನ್ ದೇಶವನ್ನೇ ಸುತ್ತುವರೆದಿದೆ.

ಉಕ್ರೇನ್ ದೇಶದ ವಾಯು ನೆಲೆ ಹಾಗೂ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಧ್ವಂಸ ಮಾಡಿರೋದಾಗಿ ಹೇಳಿಕೊಂಡಿರುವ ರಷ್ಯಾದ ರಕ್ಷಣಾ ಸಚಿವಾಲಯ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡಿರೋದಾಗಿ ಮಾಹಿತಿ ನೀಡಿದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments