Select Your Language

Notifications

webdunia
webdunia
webdunia
webdunia

ಕೊರಿಯ ಪರ್ಯಾಯ ದ್ವೀಪದ ಉದ್ವಿಗ್ನತೆ ನಿವಾರಣೆಯಲ್ಲಿ ವಿದೇಶಗಳಿಗೆ ಹಸ್ತಕ್ಷೇಪ ನಡೆಸಲು ಅವಕಾಶ ನೀಡಬಾರದು- ಸಚಿವಾಲಯದ ವಕ್ತಾರ ಬಹ್ರಮ್ ಘಾಸಿಮಿ

ಕೊರಿಯ ಪರ್ಯಾಯ ದ್ವೀಪದ ಉದ್ವಿಗ್ನತೆ ನಿವಾರಣೆಯಲ್ಲಿ ವಿದೇಶಗಳಿಗೆ ಹಸ್ತಕ್ಷೇಪ ನಡೆಸಲು ಅವಕಾಶ ನೀಡಬಾರದು- ಸಚಿವಾಲಯದ ವಕ್ತಾರ ಬಹ್ರಮ್ ಘಾಸಿಮಿ
ಇರಾನ್ , ಭಾನುವಾರ, 29 ಏಪ್ರಿಲ್ 2018 (07:15 IST)
ಇರಾನ್ : ದಕ್ಷಿಣ ಮತ್ತು ಉತ್ತರ ಕೊರಿಯಗಳ ನಡುವಿನ ಉದ್ವಿಗ್ನತೆ ನಿವಾರಣೆ ಪ್ರಯತ್ನಕ್ಕೆ ಒಪ್ಪಿಕೊಂಡ ಇರಾನ್, ಇದರಲ್ಲಿ ಪಾತ್ರವಹಿಸುವ ಅರ್ಹತೆಯನ್ನು ಅಮೆರಿಕ ಹೊಂದಿಲ್ಲ ಎಂಬುದಾಗಿ ತಿಳಿಸಿದೆ.


ಈ ಬಗ್ಗೆ ಮಾತನಾಡಿದ ಸಚಿವಾಲಯದ ವಕ್ತಾರ ಬಹ್ರಮ್ ಘಾಸಿಮಿ ಅವರು,’ ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಮತ್ತು ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್ ನಡುವಿನ ಸಭೆಯು ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಯತ್ತ ಇಡಲಾದ ಜವಾಬ್ದಾರಿಯುತ ಹಾಗೂ ಪರಿಣಾಮಕಾರಿ ಹೆಜ್ಜೆಯಾಗಿದೆ. ಆದರೆ, ಕೊರಿಯ ಪರ್ಯಾಯ ದ್ವೀಪದ ಉದ್ವಿಗ್ನತೆ ನಿವಾರಣೆಯ ಐತಿಹಾಸಿಕ ಪ್ರಕ್ರಿಯೆಯನ್ನು ಅದರಲ್ಲಿ ಭಾಗಿಯಾಗಿರುವ ಎರಡು ಪ್ರಧಾನ ಪಕ್ಷಗಳೇ ನಿಭಾಯಿಸಬೇಕು. ಹಾಗೂ ಅದರಲ್ಲಿ ವಿದೇಶಗಳಿಗೆ ಹಸ್ತಕ್ಷೇಪ ನಡೆಸಲು ಅವಕಾಶ ನೀಡಬಾರದು. ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ಇರಾನ್‌ನ 40 ವರ್ಷಗಳ ಅನುಭವದ ಆಧಾರದಲ್ಲಿ ಹೇಳುವುದಾದರೆ, ಅಮೆರಿಕ ಸರಕಾರ ಘನತೆವೆತ್ತ ಹಾಗೂ ವಿಶ್ವಾಸಾರ್ಹ ಭಾಗೀದಾರನಾಗಿಲ್ಲ. ಅದು ತನ್ನ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಗೌರವಿಸುವುದಿಲ್ಲ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಹುಚ್ಚ ವೆಂಕಟ್ ರವರ ಗುರುತಿನ ಚಿಹ್ನೆ ಯಾವುದು ಗೊತ್ತಾ…?