Select Your Language

Notifications

webdunia
webdunia
webdunia
webdunia

ಅಮೆರಿಕಾದಲ್ಲಿರುವ ಭಾರತೀಯ ಟೆಕಿಗಳು ಈಗ ನಿರಾಳ; ಎಚ್ 1 ಬಿ ವೀಸಾ ನೀತಿ ಯಥಾಸ್ಥಿತಿ

ಅಮೆರಿಕಾದಲ್ಲಿರುವ ಭಾರತೀಯ ಟೆಕಿಗಳು ಈಗ ನಿರಾಳ; ಎಚ್ 1 ಬಿ ವೀಸಾ ನೀತಿ ಯಥಾಸ್ಥಿತಿ
ವಾಷಿಂಗ್ಟನ್ , ಬುಧವಾರ, 10 ಜನವರಿ 2018 (08:34 IST)
ವಾಷಿಂಗ್ಟನ್: ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಟೆಕಿಗಳು ಈಗ ಸ್ವಲ್ಪ ನಿರಾಳರಾಗಿದ್ದಾರೆ. ಯಾಕೆಂದರೆ, ಎಚ್1ಬಿ ವೀಸಾ ಹೊಂದಿರುವವರು ದೇಶ ತೊರೆಯುವಂತೆ ಮಾಡುವ ಯಾವುದೇ ಪ್ರಸ್ತಾವವನ್ನು ಪರಿಗಣಿಸುವ ಉದ್ದೇಶ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


‘ಹಾಗೊಂದು ವೇಳೆ, ಬಿಗಿ ನೀತಿ ಅನುಸರಿಸಿದರೂ ಉದ್ಯೋಗಿಗಳು ಒಂದು ವರ್ಷಕ್ಕೆ ವೀಸಾ ವಿಸ್ತರಿಸುವ ಬೇಡಿಕೆಯನ್ನು ಸಲ್ಲಿಸಬಹುದು. ಅಮೆರಿಕ ಪೌರತ್ವ ಮತ್ತು ವಲಸೆ ಸೇವಾ ವಿಭಾಗವು ವೀಸಾ ಅವಧಿ ವಿಸ್ತರಣೆ ಮಾಡಬಹುದು’ ಎಂದು ಯುಎಸ್‌ಸಿಐಎಸ್ ಮಾಧ್ಯಮ ಪ್ರತಿನಿಧಿ ಜೊನಾಥನ್ ವಾಷಿಂಗ್ಟನ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲಾಲೂ ಜತೆಗೆ ಜೈಲಿನಲ್ಲಿ ಕಳೆಯಲು ಸಹಾಯಕರು ಮಾಡಿದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?!