Select Your Language

Notifications

webdunia
webdunia
webdunia
webdunia

ವಿಶ್ವಸಂಸ್ಥೆಯಲ್ಲಿ UNSC ಸಭೆ ನಡೆಸಿದ ಮೊದಲ ಪಿಎಂ!

ವಿಶ್ವಸಂಸ್ಥೆಯಲ್ಲಿ UNSC ಸಭೆ ನಡೆಸಿದ ಮೊದಲ ಪಿಎಂ!
ನವದೆಹಲಿ , ಮಂಗಳವಾರ, 10 ಆಗಸ್ಟ್ 2021 (12:31 IST)
ನವದೆಹಲಿ(ಆ.10): ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ, ಮುಕ್ತ ಚರ್ಚೆಯಲ್ಲಿ ಮಾತನಾಡಿದ ಅಪರೂಪದ ಘಟನೆ ನಡೆದಿದೆ.


ಈ ಸಭೆಯಲ್ಲಿ ಸೋಮವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಮುದ್ರ ವ್ಯಾಪಾರಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವುದು, ಕಡಲ ವಿವಾದಗಳ ಶಾಂತಿಯುತ ಇತ್ಯರ್ಥ ಸೇರಿದಂತೆ ‘ಐದು ತತ್ವ’ಗಳನ್ನು ಪ್ರತಿಪಾದಿಸಿದ್ದಾರೆ. ಈ ತತ್ವಗಳ ಆಧಾರದ ಮೇಲೆ ಸಮುದ್ರ ಭದ್ರತೆ ಸಹಕಾರಕ್ಕೆ ಮಾರ್ಗಸೂಚಿಯನ್ನು ಸಿದ್ಧಪಡಿಸಬಹುದಾಗಿದೆ ಎಂದು ಹೇಳಿದ್ದಾರೆ. ಉಗ್ರರಿಂದ ಎದುರಾಗುವ ಬೆದರಿಕೆ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಕರೆ ನೀಡಿದ್ದಾರೆ.
ಈ ವರ್ಷದ ಜನವರಿ 1ರಿಂದ 2 ವರ್ಷಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ‘ತಾತ್ಕಾಲಿಕ ಸದಸ್ಯ ಸ್ಥಾನ’ ಭಾರತಕ್ಕೆ ದೊರೆತಿದೆ. ಭದ್ರತಾ ಮಂಡಳಿ ರಚನೆಯಾದ ನಂತರ 7ನೇ ಬಾರಿ ಭಾರತಕ್ಕೆ ಈ ಸ್ಥಾನ ಲಭಿಸಿದೆ. ಭಾರತದ ಪ್ರಧಾನಿಯೊಬ್ಬರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಿ ಸಭೆಯನ್ನು ನಡೆಸಿದ್ದು, ದೇಶದ ಇತಿಹಾಸದಲ್ಲೇ ಮೊದಲು. ಈ ಸಭೆಯು ಕಡಲ ಅಪರಾಧ ಮತ್ತು ಅಭದ್ರತೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಹಾಗೂ ಸಮುದ್ರ ವಲಯದಲ್ಲಿ ಸಮನ್ವಯವನ್ನು ಬಲಪಡಿಸುವ ಮಾರ್ಗಗಳ ಮೇಲೆ ಮುಕ್ತ ಚರ್ಚೆ ಮೇಲೆ ಕೇಂದ್ರೀಕೃತವಾಗಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ‘ಸಮುದ್ರ ಭದ್ರತೆ ಬಲವರ್ಧನೆ- ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಒಂದು ದೃಷ್ಟಾಂತ’ ಎಂಬ ವಿಷಯದ ಚರ್ಚೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೋದಿ, ಸಮುದ್ರ ಮಾರ್ಗವನ್ನು ಭಯೋತ್ಪಾದನೆ ಮತ್ತ ಕಡಲ್ಗಳ್ಳತನಕ್ಕಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಾಗರಗಳು ವಿಶ್ವದ ಸಾಮಾನ್ಯ ಪರಂಪರೆ ಆಗಿವೆ ಮತ್ತು ಸಮುದ್ರ ಮಾರ್ಗಗಳು ಅಂತಾರಾಷ್ಟ್ರೀಯ ವ್ಯಾಪಾರದ ಜೀವನಾಡಿಯಾಗಿವೆ ಎಂಬುದನ್ನು ಒತ್ತಿ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರರಂಗ ವಿರೋಧಿಸಿದ್ದ ಮಸೂದೆಗೆ ಸಂಸತ್ ಅಸ್ತು!