ಬಾಲಕಿ ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ದಂಗಾದ ವೈದ್ಯರು

Webdunia
ಗುರುವಾರ, 1 ಡಿಸೆಂಬರ್ 2022 (14:34 IST)
ಬೀಜಿಂಗ್ : ಮದ್ಯಪಾನ, ಧೂಮಪಾನ ಹೀಗೆ ಅನೇಕ ರೀತಿಯ ಚಟಗಳನ್ನು ಬೆಳೆಸಿಕೊಂಡಿದ್ದವರನ್ನು ನೋಡಿರುವುದು ಸಾಮಾನ್ಯ.

ಆದರೆ ಇಲ್ಲೊಬ್ಬಳು ಚೀನಾದ ಬಾಲಕಿ ತನ್ನ ಕೂದಲನ್ನು ತಿನ್ನುವ ವಿಚಿತ್ರ ಚಟವನ್ನು ಹೊಂದಿದ್ದಳು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.

ಚೀನಾದ ಶಾಂಕ್ಸಿ ಪ್ರಾಂತ್ಯದ ಪಿಕಾ (14) ಎಂಬ ಯುವತಿಗೆ ಕೂದಲನ್ನು ಅಗೆಯುವ ಚಟವಿತ್ತು. ಅವಳು ಹೀಗೆ ಅಗೆಯುತ್ತಾ ಅಗೆಯುತ್ತಾ ತನ್ನ ತಲೆಯಲ್ಲಿದ್ದ ಬರೊಬ್ಬರಿ 3 ಕೆಜಿ ಕೂದಲನ್ನು ತಿಂದಿದ್ದಾಳೆ.

ಇದರ ಪರಿಣಾಮವಾಗಿ ಆಕೆಯ ತಲೆ ಬೋಳಾಗಿದೆ. ಆದರೆ ಪಿಕಾ ತಂದೆ- ತಾಯಿ ಕೆಲಸದ ಹಿನ್ನೆಲೆಯಲ್ಲಿ ದೂರದ ಊರಿನಲ್ಲಿ ವಾಸಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಅಜ್ಜಿಯ ಜೊತೆ ಇದ್ದಳು. ಅಜ್ಜಿಗೆ ವಯಸ್ಸಾಗಿದ್ದರಿಂದ ಪಿಕಾಳಿಗೆ ತುಂಬಾ ಗಂಭೀರವಾಗುವವರೆಗೂ ಅಸ್ವಸ್ಥತೆಯನ್ನು ಗಮನಿಸಲಿಲ್ಲ.

ಪಿಕಾಳಿಗೆ ದಿನ ಕಳೆದಂತೆ ಆಹಾರವನ್ನು ಸೇವಿಸಲು ಸಾಧ್ಯವಾಗದಷ್ಟು ಅಸ್ವಸ್ಥಳಾಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರಿಗೆ ಮೊದಲಿಗೆ ಕಾರಣ ತಿಳಿದಿರಲಿಲ್ಲ.

ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಪಿಕಾ ಒಪ್ಪಿಕೊಂಡಳು. ಅದಾದ ಬಳಿಕ ವೈದ್ಯರು ಸತತ 2 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ, ಆಕೆಯ ಹೊಟ್ಟೆಯಲ್ಲಿದ್ದ 3 ಕೆ.ಜಿ ತೂಕದ ಕೂದಲಿನ ಉಂಡೆಯನ್ನು ತೆಗೆದಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

BB Season 12, ಧ್ರುವಂತ್ ಮಾತಿಂದ್ದ ರೊಚ್ಚಿಗೆದ್ದ ಸೂರಜ್, ಧನುಷ್, ಸ್ಪಂದನಾ

ಸಿದ್ದರಾಮಯ್ಯ ಕಾಂಗ್ರೆಸ್ಸಿಗನೂ ಅಲ್ಲ, ಜೆಡಿಎಸ್ ಅಲ್ಲ, ಅಹಿಂದ ನಾಯಕನೂ ಅಲ್ಲ: ಎಚ್ ವಿಶ್ವನಾಥ್

ಸಿದ್ದು, ಡಿಕೆಶಿ ಕುರ್ಚಿ ಕಿತ್ತಾಟದ ನಡುವೆ ಈ ಸಚಿವನಿಗೆ ಸಿಎಂ ಸ್ಥಾನ ನೀಡಬೇಕೆಂದ ಮುನಿ ಸ್ವಾಮೀಜಿ

ದೆಹಲಿ ನಮ್ಮ ದೇವಸ್ಥಾನ, ಸಿಎಂ ಕುರ್ಚಿ ಕಿತ್ತಾಟದ ನಡುವೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಡಿಕೆಶಿ ಪರ ಸ್ವಾಮೀಜಿಗಳು, ಸಿದ್ದರಾಮಯ್ಯ ಪರ ಕುರುಬರ ಸಂಘ ಹೋರಾಟದ ಎಚ್ಚರಿಕೆ

ಮುಂದಿನ ಸುದ್ದಿ
Show comments