ತನ್ನ ಸಹೋದರಿಯ ಮೇಲೆ ಎಂಟು ಬಾರಿ ಅತ್ಯಾಚಾರ ಮಾಡಿದ ಸಹೋದರ

ಸೋಮವಾರ, 23 ಜುಲೈ 2018 (06:58 IST)
ಜಕಾರ್ತಾ : ಇಂಡೋನೇಷ್ಯಾದಲ್ಲಿ ಸೋದರನಿಂದ ಅತ್ಯಾಚಾರಕ್ಕೊಳಗಾದ 15 ವರ್ಷದ ಬಾಲಕಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.


ಕಾರಣ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಬಾಲಕಿ ಮೇಲೆ ಆಕೆಯ 17 ವರ್ಷದ ಸಹೋದರ ಎಂಟು ಬಾರಿ ಅತ್ಯಾಚಾರ ಎಸಗಿದ್ದು, ಬಾಲಕಿ ಆರು ತಿಂಗಳ ತಾಯಿಯಾದ ಬಳಿಕ ಗರ್ಭಪಾತ ಮಾಡಿಸಿದ್ದಾಳೆ. ಮಕ್ಕಳ ರಕ್ಷಣೆ ಕಾಯ್ದೆಯಡಿ, ಗರ್ಭಿಣಿಯಾದ 6 ವಾರದೊಳಗೆ ನೋಂದಾಯಿಸಿಕೊಂಡು ಗರ್ಭಪಾತ ಮಾಡಿಸಬೇಕು.ಆದರೆ ಆಕೆ ಆರು ತಿಂಗಳ ನಂತರ  ಗರ್ಭಪಾತ ಮಾಡಿಸಿದ್ದಕ್ಕೆ ಆಕೆಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಇಂಡೋನೇಷಿಯಾ ಅಧಿಕಾರಿಗಳು ತಿಳಿಸಿದ್ದಾರೆ.


ಅತ್ಯಾಚಾರ ಎಸಗಿದ ಆಕೆಯ 17 ವರ್ಷದ ಸಹೋದರನನ್ನು ವಿಚಾರಣೆ ನಡೆಸಿದ ಬಳಿಕ ಮೂರಾ ಬುಲಿಯನ್ ಜಿಲ್ಲಾ ಕೋರ್ಟ್ ಆತನಿಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಸುಪ್ರಿಂಕೋರ್ಟ್