Publish Date: Sun, 21 Jan 2018 (07:11 IST)
Updated Date: Sun, 21 Jan 2018 (07:31 IST)
ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಇಂಟರ್ ಕಾಂಟಿನೆಂಟಲ್ ಹೋಟೆಲ್ ಮೇಲೆ ನಾಲ್ವರು ಭಯೋತ್ಪಾದಕರು ಶನಿವಾರ ರಾತ್ರಿ ಗುಂಡಿನ ದಾಳಿ ಮಾಡಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದಾರೆ. ಹಲವರಿಗೆ ಗಾಯವಾಗಿದೆ.
ಹೋಟೆಲ್‌ನ ಅಡುಗೆ ಮನೆಯಿಂದ ಕಟ್ಟಡದ ಮುಖ್ಯಭಾಗ ತಲುಪಿರುವ ಉಗ್ರರು ಗುಂಡಿನ ಸುರಿಮಳೆಗೈದಿದ್ದರು. ಹೊಟೇಲ್ ಸುತ್ತುವರಿದಿರುವ ಭದ್ರತಾ ಪಡೆಯು ದಾಳಿಕೋರರ ವಿರುದ್ಧ ಪ್ರತಿ ದಾಳಿ ನಡೆಸಿದ್ದಾರೆ
ಇದು ಎರಡನೇ ಬಾರಿಗೆ ಹೋಟೆಲ್ ಅನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ಮಾಡಿದ್ದಾರೆ. 2011ರಲ್ಲೂ ಇಂಟರ್‌ಕಾಂಟಿನೆಂಟಲ್ ಮೇಲೆ ದಾಳಿ ನಡೆದು 21 ಜನರು ಬಲಿಯಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ