ಎಲಿನಾ ಸ್ವಿಟೋಲಿನಾ ಟೆನ್ನಿಸ್ ಅಸೋಷಿಯೇಶನ್ ಪಂದ್ಯಾವಳಿಯಿಂದ ತನಗೆ ಬರಲಿರುವ ಬಹುಮಾನ ಮೊತ್ತವನ್ನು ಉಕ್ರೇನಿನ ಸೇನೆಗೆ ಹಾಗೂ ಸಂತ್ರಸ್ತರಿಗೆ ಮಾನವೀಯ ನೆರವು ಒದಗಿಸುವ ನಿಟ್ಟಿನಲ್ಲಿ ದೇಣಿಗೆಯಾಗಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ವಿಶ್ವದ ನಂಬರ್ 16ನೇ ಸ್ಥಾನದಲ್ಲಿರುವ ಎಲಿನಾ, ಉಕ್ರೇನಿನಲ್ಲಿದ್ದು ದೇಶವನ್ನು ರಕ್ಷಿಸುವ ಹೋರಾಡುತ್ತಿರುವ ತನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಸಹಾಯ ಮಾಡಲು ಬಯಸುತ್ತೇನೆ. ನನ್ನ ದೇಶದಲ್ಲಿ ಕೆಲವು ಪ್ರಾಣ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ.
ಮೆಕ್ಸಿಕೊ ಹಾಗೂ ಅಮೆರಿಕದಲ್ಲಿ ನಡೆಯುತ್ತಿರುವ ಪಂದ್ಯಗಳಲ್ಲಿ ನಾನು ಪಡೆಯುವ ಬಹುಮಾನ ಎಲ್ಲ ಮೊತ್ತವನ್ನು ಉಕ್ರೇನಿನ ಸೇನೆಗೆ ಹಾಗೂ ಸಂತ್ರಸ್ತರಿಗೆ ನೀಡುತ್ತೇನೆ ಎಂದಿದ್ದಾರೆ.