Publish Date: Fri, 20 May 2022 (07:02 IST)
Updated Date: Fri, 20 May 2022 (07:05 IST)
ಕಾಬೂಲ್ : ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ದಿನೇ ದಿನೇ ಮಹಿಳೆಯರ ಸ್ವತಂತ್ರ್ಯವನ್ನು ಕಸಿದುಕೊಳ್ಳುತ್ತಲೇ ಇದೆ.
ಚಾಲನಾ ಪರವಾನಗಿ ಕಸಿದುಕೊಂಡಾಯ್ತು, ಪುರುಷರೊಂದಿಗೆ ಉದ್ಯಾನವನ, ಉಪಹಾರಗೃಹಕ್ಕೆ ಹೋಗುವುದನ್ನೂ ನಿಷೇಧಿಸಿತು. ಇದೀಗ ದೂರದರ್ಶನಗಳಲ್ಲಿ ಕೆಲಸ ಮಾಡುವ ನಿರೂಪಕಿಯರಿಗೂ ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವಂತೆ ಆದೇಶಿಸಿದೆ.
ದೂರದರ್ಶನ, ಸುದ್ದಿ ವಾಹಿನಿಗಳಲ್ಲಿ ಮಹಿಳಾ ನಿರೂಪಕಿಯರು ಸುದ್ದಿ ಪ್ರಸಾರ ಮಾಡುವ ಸಂದರ್ಭ ತಮ್ಮ ಮುಖವನ್ನು ಮುಚ್ಚಿಕೊಳ್ಳುವಂತೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ದೂರದರ್ಶನ ಅಧಿಕಾರಿಗಳನ್ನು ಕೇಳಿದ್ದಾರೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನದ ಎಲ್ಲಾ ಮಹಿಳೆಯರೂ ಅಡಿಯಿಂದ ಮುಡಿ ವರೆಗೆ ತಮ್ಮ ದೇಹವನ್ನು ಮುಚ್ಚಿಕೊಳ್ಳಬೇಕಾಗಿ ಆದೇಶ ನೀಡಿತ್ತು. ಇದೀಗ ಸುದ್ದಿ ನಿರೂಪಕಿಯರಿಗೂ ಮುಖ ಮುಚ್ಚಿಕೊಳ್ಳುವಂತೆ ಹೇಳಿದ್ದು, ಮೇ 21ರ ಒಳಗಾಗಿ ಎಲ್ಲಾ ನಿರೂಪಕಿಯರೂ ಈ ನಿಯಮವನ್ನು ಪಾಲಿಸಬೇಕಾಗಿ ಗಡುವು ನೀಡಿದೆ.