Publish Date: Mon, 06 Mar 2023 (14:34 IST)
Updated Date: Mon, 06 Mar 2023 (14:36 IST)
ಇಸ್ಲಾಮಾಬಾದ್ : ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಒಂಭತ್ತು ಪೊಲೀಸರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾದ ಸಿಬ್ಬಿ ನಗರದಲ್ಲಿ ಈ ದಾಳಿ ನಡೆದಿದೆ. ಬಲೂಚಿಸ್ತಾನ್ ಕಾನ್ಸ್ಟಾಬ್ಯುಲರಿಯ ಸದಸ್ಯರು ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಪೊಲೀಸ್ ಟ್ರಕ್ಗೆ ಮೋಟಾರ್ ಬೈಕ್ ಡಿಕ್ಕಿ ಹೊಡೆದು ದಾಳಿ ಮಾಡಯಿತು. ಪರಿಣಾಮ ಪೊಲೀಸರು ಪ್ರಯಾಣಿಸುತ್ತಿದ್ದ ವಾಹನ ಪಲ್ಟಿಯಾಗಿದೆ.
ಆತ್ಮಹತ್ಯಾ ಬಾಂಬರ್ ಮೋಟಾರ್ ಬೈಕನ್ನು ಚಲಾಯಿಸುತ್ತಿದ್ದ. ಹಿಂದಿನಿಂದ ಬಂದು ಟ್ರಕ್ಗೆ ಡಿಕ್ಕಿ ಹೊಡೆಸಿದ್ದಾನೆ. ಪರಿಣಾಮ 9 ಪೊಲೀಸರು ಮೃತಪಟ್ಟಿದ್ದಾರೆ. ದಾಳಿಯಲ್ಲಿ 7 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಬ್ದುಲ್ ಹೈ ಅಮೀರ್ ತಿಳಿಸಿದ್ದಾರೆ.