Select Your Language

Notifications

webdunia
webdunia
webdunia
webdunia

ಮಕ್ಕಳ ಆರೋಗ್ಯದ ಬಗ್ಗೆ ಸಿಹಿ ಸುದ್ದಿ ಕೊಟ್ಟ ಅಧ್ಯಯನ ವರದಿ!

ಮಕ್ಕಳ ಆರೋಗ್ಯದ ಬಗ್ಗೆ ಸಿಹಿ ಸುದ್ದಿ ಕೊಟ್ಟ ಅಧ್ಯಯನ ವರದಿ!
ಲಂಡನ್ , ಗುರುವಾರ, 5 ಆಗಸ್ಟ್ 2021 (11:41 IST)
ಲಂಡನ್(ಆ.05): ಮಕ್ಕಳ ಮೇಲೆ ಕೋವಿಡ್ನ 3ನೇ ಅಲೆ ಭಾರತದಲ್ಲಿ ಹೆಚ್ಚು ಪರಿಣಾಮ ಬೀರಲಿದೆ ಎಂಬ ವಾದಗಳು ಕೇಳಿ ಬರುತ್ತಿರುವ ನಡುವೆ, ಬ್ರಿಟನ್ನಲ್ಲಿ ನಡೆದ ಅಧ್ಯಯನವೊಂದು ಸಮಾಧಾನದ ಸುದ್ದಿ ನೀಡಿದೆ. ಕೋವಿಡ್ ಸೋಂಕು ತಗುಲಿದರೆ ಮಕ್ಕಳು 6 ದಿನದಲ್ಲೇ ಗುಣವಾಗುತ್ತಾರೆ ಹಾಗೂ ಅವರಲ್ಲಿ ಸೋಂಕು ಲಕ್ಷಣಗಳು 4 ವಾರಕ್ಕಿಂತ ಹೆಚ್ಚು ಕಾಲ ಇರುವುದಿಲ್ಲ. 4 ವಾರ ಮೀರುವುದು ತುಂಬಾ ಅಪರೂಪ ಎಂದು ತಿಳಿಸಿದೆ.

ಲಂಡನ್ ಕಿಂಗ್ಸ್ ಕಾಲೇಜು ನಡೆಸಿದ ಈ ಅಧ್ಯಯನವನ್ನು ‘ಲ್ಯಾನ್ಸೆಟ್’ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ. ಕೋವಿಡ್ ಪೀಡಿತರಾಗಿದ್ದ 25 ಸಾವಿರ ಶಾಲಾ ಮಕ್ಕಳ (5ರಿಂದ 17 ವರ್ಷ) ಅನುಭವ ಆಧರಿಸಿ ಅವರ ಪೋಷಕರಿಂದ ಮಾಹಿತಿ ಪಡೆದು ಈ ಅಧ್ಯಯನ ನಡೆಸಲಾಗಿದೆ.
ಮಕ್ಕಳಿಗೆ ಕೋವಿಡ್ ಬಹುಕಾಲ ಬಾಧಿಸುವುದು ತುಂಬಾ ಅಪರೂಪ. ಕೆಲವೇ ಕೆಲವು ಮಕ್ಕಳು ದೀರ್ಘಾವಧಿಯಲ್ಲಿ ಕೋವಿಡ್ನಿಂದ ಕಷ್ಟಪಡುತ್ತಾರೆ ನಿಜ ಎಂದು ಮಕ್ಕಳಲ್ಲಿ ಕಂಡುಬಂದ ಸೋಂಕಿನ ಅನುಭವವನ್ನು ಅಧ್ಯಯನದಲ್ಲಿ ವಿವರಿಸಲಾಗಿದೆ.
ಹಿರಿಯರು ಕೋವಿಡ್ನಿಂದ ಗುಣವಾದರೂ ಸಾಕಷ್ಟುದೀರ್ಘಾವಧಿಗೆ ಸೋಂಕಿನ ಲಕ್ಷಣ ಹೊಂದಿ ಕಷ್ಟಪಡುತ್ತಾರೆ. ಆದರೆ ಮಕ್ಕಳಲ್ಲಿ ಹೀಗಾಗದು. ಹಲವು ಮಕ್ಕಳಿಗೆ ಸೋಂಕಿನ ಲಕ್ಷಣಗಳೇ ಕಾಣಿಸಿಲ್ಲ. ಇನ್ನು ಕೆಲವರಿಗೆ ಲಘು ಲಕ್ಷಣಗಳು ಕಾಣಿಸಿಕೊಂಡಿವೆ.
1734 ಮಕ್ಕಳಲ್ಲಿ ಮಾತ್ರ ಸಂಪೂರ್ಣ ಗುಣಮುಖ ಆಗುವವರೆಗೆ ಸೋಂಕು ಲಕ್ಷಣ ಇದ್ದೇ ಇದ್ದವು. ಆದರೆ ಉಳಿದ ಬಹುತೇಕ ಮಕ್ಕಳು 6 ದಿನ ಮಾತ್ರ ಸೋಂಕುಪೀಡಿತರಾಗಿದ್ದರು. ಒಂದರಿಂದ 4 ವಾರ ಮಾತ್ರ ಅವರಲ್ಲಿ ಸೋಂಕು ಲಕ್ಷಣ ಕಾಣಿಸಿತು. ಹೀಗಾಗಿ ಮಕ್ಕಳು ಬೇಗ ಗುಣವಾಗುತ್ತಾರೆ ಎಂದು ಹೇಳಬಹುದು ಎಂದು ಅಧ್ಯಯನ ಹೇಳಿದೆ.
ಮಕ್ಕಳಲ್ಲಿ ‘ಆಯಾಸ’ವು ಹೆಚ್ಚಾಗಿ ಕಂಡುಬಂದ ಸೋಂಕು ಲಕ್ಷಣ ಎಂದು ಅದು ವಿವರಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ಸೋಂಕು ಹರಡುವಿಕೆ ಸೂಚ್ಯಂಕ ಸಂಖ್ಯೆಯಲ್ಲಿ ಏರಿಕೆ