Select Your Language

Notifications

webdunia
webdunia
webdunia
webdunia

ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಾಕುವ ಮುನ್ನ ಎಚ್ಚರ

ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಾಕುವ ಮುನ್ನ ಎಚ್ಚರ
ಮುಂಬೈ , ಶನಿವಾರ, 29 ಜುಲೈ 2017 (20:23 IST)
ಸಾಮಾಜಿಕ ಜಾಲತಾಣಗಳಿಗೆ ನಿಮ್ಮ .ಫೋಟೋಗಳನ್ನ ಹಾಕುವ ಮುನ್ನ ಎಚ್ಚರ. ಸೈಬರ್ ಸುಲಿಗೆಕೋರರು ನಿಮ್ಮ ಫೋಟೋ ಬಳಸಿಕೊಂಡು ಪೋರ್ನ್ ಸೈಟ್`ಗಳಿಗೆ ಹಾಕಿ ಅವಾಂತರ ಸೃಷ್ಟಿಸಿ ಹಣ ಕೀಳಬಹುದು.
 

ಹೌದು, ಇಂತಹ ಪ್ರಕರಣಗಳು ಇತ್ತೀಚೆಗೆ ಭಾರತದಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಫೇಸ್ಬುಕ್, ಟ್ವಿಟ್ಟರ್, ಇನ್ಸ್`ಸ್ಟಾಗ್ರಾಮ್`ಗಳಿಂದ ಫೋಟೊ ಕದ್ದು ಪೋರ್ನ್ ಸೈಟ್`ಗಳಿಗೆ ಹಾಕುವ ದುಷ್ಕರ್ಮಿಗಳು ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಹ್ಯಾಕ್ ಮಾಡಿ ನಿಮ್ಮ ಗೆಳೆಯರಿಗೆ ಬೆತ್ತಲೆ ಸೈಟ್`ಗೆ ಲಿಂಕ್ ಕೊಟ್ಟುಅ ಮಾರ್ಫ್ ಮಾಡಿದ ಬೆತ್ತಲೆ ಫೋಟೋವನ್ನ ಅವರ ಮುಂದೆ ಪ್ರದರ್ಶಿಸುತ್ತಾರೆ. ಬಳಿಕ ನಿಮ್ಮನನ ಸಂಪರ್ಕಿಸುವ ದುಷ್ಕರ್ಮಿಗಳು ಮಾರ್ಫಿಂಗ್ ಫೋಟೊ ತೆಗೆಯಲು ಹಣ ಡಿಮ್ಯಾಂಡ್ ಮಾಡುತ್ತಾರೆ.

ನವದೆಹಲಿಯ ಮಯೂರ್ ವಿಹಾರ್ ಮಹಿಳೆಯೊಬ್ಬರಿಗೆ ಇದೇ ರೀತಿ ಬ್ಲಾಕ್ ಮೇಲ್ ಮಾಡಿರುವ ಸೈಬರ್ ಚೋರರು 20000 ರೂ. ಹಣ ಪಡೆದು ಫೋಟೋವನ್ನೂ ಡಿಲೀಟ್ ಮಾಡದೇ ವಂಚನೆ ಮಾಡಿದ್ದಾರೆ. ಮಹಿಳೆಯ ಫೇಸ್ಬುಕ್ ಅಕೌಂಟ್`ನಿಂದ ಪ್ರೊಫೈಲ್ ಫೋಟೋ ತೆಗೆದು, ಪೋರ್ನ್ ಸೈಟ್`ಗೆ ಹಾಕಿ ಹಣ ಪೀಕಿದ್ದರು. ದಕ್ಷಿಣ ದೆಹಲಿಯ ವಿದ್ಯಾರ್ಥಿಯೊಬ್ಬರ ಫೋಟೋ ಸಹ ಇದೇ ರೀತಿ ಸೈಬರ್ ಚೋರರಿಗೆ ಆಹಾರವಾಗಿದ್ದವು. ಪೋರ್ನ್ ವಿಡಿಯೋವೊಂದು ವಿದ್ಯಾರ್ಥಿನಿಯ ಫೋಟೋ ಹಾಕಲಾಗಿತ್ತು. ನೋಯ್ಡಾ ಮಹಿಳೆಯೂ ಸಹ ಸೈಬರ್ ಚೋರರ ಹೀನ ಕೃತ್ಯಕ್ಕೆ ತುತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಹುಟ್ಟಿನಿಂದ ಮಾತ್ರ ಲಿಂಗಾಯುತ, ಆಚರಣೆಯಲ್ಲಲ್ಲ : ಮಾತೆ ಮಹಾದೇವಿ