Select Your Language

Notifications

webdunia
webdunia
webdunia
webdunia

ಬಾರ್ನಲ್ಲಿ ಗುಂಡಿನ ದಾಳಿ! ಸಾಕಷ್ಟು ಮಂದಿ ಸ್ಥಳದಲ್ಲೇ ಸಾವು

ಬಾರ್ನಲ್ಲಿ ಗುಂಡಿನ ದಾಳಿ! ಸಾಕಷ್ಟು ಮಂದಿ ಸ್ಥಳದಲ್ಲೇ ಸಾವು
ಜೋಹಾನ್ಸ್ಬರ್ಗ್ , ಸೋಮವಾರ, 11 ಜುಲೈ 2022 (07:41 IST)
ಜೋಹಾನ್ಸ್ಬರ್ಗ್ : ದಕ್ಷಿಣ ಆಫ್ರಿಕಾದ ಸೊವೆಟೊ ಟೌನ್ಶಿಪ್ನಲ್ಲಿರುವ ಬಾರ್ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ ವೇಳೆ 15 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನ ಸೊವೆಟೊ ಟೌನ್ಶಿಪ್ನಲ್ಲಿರುವ ಬಾರ್ನಲ್ಲಿ ಈ ಘಟನೆ ನಡೆದಿದೆ. ಮಿನಿಬಸ್ ಟ್ಯಾಕ್ಸಿಯಲ್ಲಿ ಬಂದ ಗುಂಪೊಂದು ಬಾರ್ನಲ್ಲಿ ಕೆಲವರ ಮೇಲೆ ಗುಂಡು ಹಾರಿಸಿದೆ. ಈ ವೇಳೆ 15 ಮಂದಿ ಮೃತಪಟ್ಟಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದಾದ ಬಳಿಕ ಆರೋಪಿಗಳೆಲ್ಲರೂ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮಧ್ಯಾಹ್ನದ ಊಟ ಇಲ್ಲ, ಶಿಕ್ಷಕರಿಗೆ ಮಸಾಜ್ ಬೇಕಂತೆ!