Select Your Language

Notifications

webdunia
webdunia
webdunia
webdunia

ಲೈಂಗಿಕ ಆಸಕ್ತಿ ಕುಗ್ಗಿದೆಯಾ..? ಇಲ್ಲಿವೆ ಹಲವು ಕಾರಣಗಳು

ಲೈಂಗಿಕ ಆಸಕ್ತಿ ಕುಗ್ಗಿದೆಯಾ..? ಇಲ್ಲಿವೆ ಹಲವು ಕಾರಣಗಳು
ಲಂಡನ್ , ಗುರುವಾರ, 17 ಆಗಸ್ಟ್ 2017 (15:54 IST)
ಲೈಂಗಿಕ ಜೀವನ ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಪ್ರಮುಖವಾದದ್ದು, ಆದರೆ, ವಿಶ್ವಾದ್ಯಂತ 26ರಿಂದ 43 ವರ್ಷ ವಯಸ್ಸಿನ ಸ್ತ್ರೀ ಪುರುಷರು ಲೈಂಗಿಕಾಸಕ್ತಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ದಿ ಗ್ಲೋಬಲ್ ಸ್ಟಡಿ ಆಫ್ ಸೆಕ್ಸುವಲ್ ಆಟಿಟ್ಯೂಡ್ಸ್ ಅಂಡ್ ಬಿಹೇವಿಯರ್ ಸಂಸ್ಥೆ ಹೇಳಿದೆ. ಇದರ ಜೊತೆಗೆ ಲೈಂಗಿಕಾಸಕ್ತಿ ಕೊರತೆಯ ಕಾರಣಗಳನ್ನೂ ಸಂಸ್ಥೆ ಪಟ್ಟಿ ಮಾಡಿದೆ.
 

1.ಕೌಟುಂಬಿಕ ಕಾರಣಗಳು: ಮೊದಲನೆಯದಾಗಿ ಕೌಟುಂಬಿಕ ಸಮಸ್ಯೆಗಳು, ಕೆಲ ನಂಬಿಕೆಗಳು ನಮ್ಮ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುತ್ತೆ. ಧಾರ್ಮಿಕ ಕಾರಣಗಳಿಂದ ಕೆಲವೊಮ್ಮೆ ಲೈಂಗಿಕತೆಯಿಂದ ದೂರವಿರುವುದು. ಲೈಂಗಿಕತೆ ಆರಂಭದಲ್ಲಿ ಇರುವ ಭಯ ಹಾಗೆಯೇ ಮುಂದುವರೆದಿರುವುದು ಸಮಸ್ಯೆಗೆ ಕಾರಣ.

2. ದೇಹದ ಆತ್ಮಸ್ಥೈರ್ಯದ ಕೊರತೆ: ಸಾಂಪ್ರದಾಯಿಕ ಕುಟುಂಬಗಳಲ್ಲಿ ಗ್ಲಾಮರಸ್ ಆಗುವ ಕಾಣುವ ಮಹಿಳೆಯರ ಬಗ್ಗೆ ತಲೆಗೆ ತುಂಬುವ ಅಭಿಪ್ರಾಯಗಳು ಮದುವೆಯಾದ ಬಳಿಕವೂ ಮುಂದುವರೆಯಬಹುದು
ಹೆಚ್ಚಿನ ಜನರು, ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರಣಗಳಿಗಾಗಿ, ಸೆಕ್ಸ್ ಕೆಟ್ಟದ್ದಾಗಿರಬಹುದು ಅಥವಾ ಭಯಪಡಬಹುದೆಂದು ಭಾವಿಸಿದ ಸ್ಥಳದಲ್ಲಿ ನೀವು ಬೆಳೆದಿದ್ದರೆ, ನಿಮ್ಮ ಸ್ವಂತ ಆರಂಭಿಕ ಲೈಂಗಿಕ ಅನ್ವೇಷಣೆಯನ್ನು ನಿಗ್ರಹಿಸಬಹುದು.
.
3. ಸೆಕ್ಸ್`ನಲ್ಲಿ ಹಲೆಯ ಕೆಟ್ಟ ಅನುಭವಗಳು
ಈ ಹಿಂದೆ ಸೆಕ್ಸ್ ವಿಚಾರವಾಗಿ ಕಂಡ ಕೆಟ್ಟ ಅನುಭವಗಳೂ ಲೈಂಗಿಕತೆ ಮೇಲೆ ಪ್ರಭಾವ ಬೀರುತ್ತವೆ. ಅತ್ಯಾಚಾರಕ್ಕೀಡಾದ ಯುವತಿ ಮದುವೆಯಾದ ಬಳಿಕ ಲೈಂಗಿಕತೆ ಬಗ್ಗೆ ಕೆಟ್ಟ ಭಾವ ಹೊಂದಿರುವ ಸಾಧ್ಯತೆ ಹೆಚ್ಚು.ಅತಿ ಚಿಕ್ಕ ವಯಸ್ಸಿನಲ್ಲೇ ಸೆಕ್ಸ್ ತೊಡಗಿಕೊಮಡಿದ್ದ ಮಹಿಳೆಯರು ಆ ನೋವನ್ನ ಮರೆಯದೇ ಇರಬಹುದು.
 .
4. ವೈದ್ಯಕೀಯ ಸಮಸ್ಯೆ: ಗಮನಾರ್ಹ ವೈದ್ಯಕೀಯ ಸಮಸ್ಯೆಗಳು ಸಹ ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಥೈರಾಯ್ಡ್ ಸಮಸ್ಯೆ, ಕ್ರಾನಿಕ್ ಪೆನ್, ಕ್ಯಾನ್ಸರ್ ಚಿಕಿತ್ಸೆಗಳು, ರಕ್ತದೊತ್ತಡಗಳ ಔಷಧಿಗಳು ಸಹ ಪರಿಣಾಮ ಬೀರಬಹುದು.

5.ಒತ್ತಡದ ಬದುಕು: ಇಂದಿನ ಯಾಂತ್ರಿಕ ಜೀವನದ ಪ್ರತಿಯೊಬ್ಬರ ಜೀವನಶೈಲಿ ಮೇಲೆ ಒತ್ತಡದ ಬದುಕು ಪರಿಣಾಮ ಬೀರುತ್ತೆ. ಅದರಂತೆ ಲೈಂಗಿಕ ಜೀವನದ ಮೇಲೂ ಇದು ಪ್ರಭಾವ ಬೀರುತ್ತೆ. ಕೆಲಸ ಮತ್ತು ಜೀವನದ ಒತ್ತಡದಿಂದ ಸೆಕ್ಸ್`ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಸಂಗಾತಿ ಜೊತೆ ಪರಿಪೂರ್ಣವಾಗಿ ತೊಡಗಿಸಿಕೊಳ್ಳುವುದು ಕಷ್ಟಕರವಾಗುತ್ತದೆ.

7. ನಂಬಿಕೆ ಕೊರತೆ: ಸೆಕ್ಸ್ ಎಂಬುದು ಸಂಬಂಧದ ಪ್ರತಿಬಿಂಬ. ಅಪನಂಬಿಕೆ ಉಂಟಾದರೆ ಲೈಂಗಿಕ ಸಂಬಂದ ಹದಗೆಡುತ್ತದೆ. ಪರಸ್ಪರರ ನಡುವೆ ಪ್ರೀತಿ ಜೊತೆ ವಿಶ್ವಾಸವೂ ಇರಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿರಾ ಹೆಸರಿಡಲು ಬಿಡುವುದಿಲ್ಲ: ಯಡಿಯೂರಪ್ಪ ಆಕ್ರೋಶ