Publish Date: Thu, 17 Aug 2017 (15:48 IST)
Updated Date: Thu, 17 Aug 2017 (15:51 IST)
ಮೂರಾರ್ಜಿ ದೇಸಾಯಿ ಶಾಲೆಗಳಿಗೆ ಯಾವುದೇ ಕಾರಣಕ್ಕೂ ಇಂದಿರಾ ಹೆಸರು ಇಡಲು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದಿರಾ ಕ್ಯಾಂಟಿನ್ ನಂತರ, ಮೂರಾರ್ಜಿ ಮತ್ತು ಚೆನ್ನಮ್ಮ ವಸತಿ ಶಾಲೆಗಳ ಹೆಸರುಗಳನ್ನು ಬದಲಿಸಿ ಇಂದಿರಾ ಹೆಸರಿಡುವ ಬಗ್ಗೆ ರಾಜ್ಯ ಸರಕಾರ ಕೂಡಲೇ ಆದೇಶ ವಾಪಸ್ ಪಡೆಯಬೇಕು. ಒಂದು ವೇಳೆ, ಮೂರಾರ್ಜಿ ದೇಸಾಯಿ ಮತ್ತು ಚೆನ್ನಮ್ಮ ಹೆಸರು ಬದಲಿಸಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗುಡುಗಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಸೊಕ್ಕು ಬಂದಿದೆ. ಸೊಕ್ಕಿಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಕೇವಲ ಅಧಿಕಾರಬಲದಿಂದ ಚುನಾವಣೆ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸಿಎಂ ಪುತ್ರನ ವಿರುದ್ಧ ಭ್ರಷ್ಟಾಚಾರ ಆರೋಪ ಇಲ್ಲವಾ? ಸಚಿವ ಮಹಾದೇವಪ್ಪ ಪುತ್ರನ ವಿರುದ್ಧ ಕೇಸ್ ಇಲ್ಲವಾ?ಮತ್ತೆಂತಹ ಭ್ರಷ್ಟಾಚಾರದ ಆರೋಪಗಳು ಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.