ಇಸ್ತಾಂಬುಲ್ : ದಕ್ಷಿಣ ಟಿರ್ಕಿ ಪ್ರಾಂತ್ಯದ ಒಸ್ಮಾನಿಯೆದಲ್ಲಿ 7.8 ತೀವ್ರತೆಯ ಭೂಕಂಪನ ಸಂಭವಿಸಿ 90 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ.
ಭೂಕಂಪನವು ಸುಮಾರು 17.9 ಕಿ.ಮೀವರೆಗೂ ಸಂಭವಿಸಿದೆ. ಭೂಕಂಪನದಿಂದಾಗಿ ಸುಮಾರು 34 ಕಟ್ಟಡಗಳು ನಾಶವಾಗಿವೆ. ಸರ್ಕಾರದ ವಿಪತ್ತು ನಿರ್ವಹಣಾ ಸಂಸ್ಥೆಯಾದ ಎಎಫ್ಎಡಿ ಪ್ರಕಾರ, ಭೂಕಂಪದ ತೀವ್ರತೆಯು 7.4 ಆಗಿದೆ ಎಂದು ತಿಳಿಸಿದೆ.
ಗಜಿಯಾಂಟೆಪ್ನ ದಕ್ಷಿಣ ಪ್ರದೇಶವು ಟರ್ಕಿಯ ಪ್ರಮುಖ ಕೈಗಾರಿಕಾ ಹಾಗೂ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ. ಜೊತೆಗೆ ಈ ಪ್ರದೇಶವು ಸಿರಿಯಾದ ಗಡಿಯಾಗಿದೆ. ಮೂಲಗಳ ಪ್ರಕಾರ ಸಿರಿಯಾ ಹಾಗೂ ಸೈಪ್ರಸ್ನಲ್ಲಿಯೂ ಭೂಕಂಪನದ ಅನುಭವವಾಗಿದೆ.