Select Your Language

Notifications

webdunia
webdunia
webdunia
Thursday, 10 April 2025
webdunia

ತಾಲಿಬಾನಿಗಳಿಂದ ಗುಂಡು ಹಾರಿಸಿ ಸಂಭ್ರಮ: ಮಕ್ಕಳು ಸೇರಿದಂತೆ ಹಲವರ ಸಾವು

taliban
bengaluru , ಶನಿವಾರ, 4 ಸೆಪ್ಟಂಬರ್ 2021 (14:10 IST)
ಆಫ್ಘಾನಿಸ್ತಾವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಗುಂಡು ಹಾರಿಸಿ ಸಂಭ್ರಮ ಆಚರಿಸುವವೇಳೆ ಮಕ್ಕಳು ಸೇರಿದಂತೆ ಹಲವಾರು ಮೃತಪಟ್ಟಿದ್ದಾರೆ.
ಆಫ್ಘಾನಿಸ್ತಾನದ ಪನ್ಶೀರ್ ಅನ್ನು ವಶಪಡಿಸಿಕೊಂಡ ನಂತರ ತಾಲಿಬಾನಿಗಳು ಕಾಬೂಲ್ ನಲ್ಲಿ ಭಾರೀ ಪ್ರಮಾಣದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮ ಆಚರಿಸಿದರು. ಈ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಮಕ್ಕಳು ಸೇರಿದಂತೆ ಹಲವಾರು ಮಂದಿ ಅಸುನೀಗಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಪನ್ಶೀರ್ ಕೈವಶ ಮಾಡಿಕೊಳ್ಳುವ ಮೂಲಕ ತಾಲಿಬಾನಿಗಳು ಸಂಪೂರ್ಣವಾಗಿ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡಂತಾಗಿದೆ. ನಮಗೆ ತೊಂದರೆ ಕೊಡುವವರು ಸೋತಿದ್ದಾರೆ ಎಂದು ತಾಲಿಬಾನಿ ವಕ್ತಾರ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜಿರಿಯನ್ನರ ಬಂಧನ