Select Your Language

Notifications

webdunia
webdunia
webdunia
webdunia

ವಿಶ್ವಸಂಸ್ಥೆಯಲ್ಲಿ ರಷ್ಯಾ ಭರವಸೆ

ವಿಶ್ವಸಂಸ್ಥೆಯಲ್ಲಿ ರಷ್ಯಾ ಭರವಸೆ
ನವದೆಹಲಿ , ಭಾನುವಾರ, 13 ಮಾರ್ಚ್ 2022 (08:38 IST)
ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ದೇಶಗಳ ನಾಗರಿಕರ ಸ್ಥಳಾಂತರಕ್ಕೆ ಬಸ್ಸುಗಳ ವ್ಯವಸ್ಥೆ ಮಾಡುವುದಾಗಿ ರಷ್ಯಾ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೂ ಶನಿವಾರ ಮಾಹಿತಿ ನೀಡಿದೆ.
 
ಸದ್ಯ ಪೂರ್ವ ಉಕ್ರೇನ್ನ ಖಾರ್ಕಿವ್ ಮತ್ತು ಸುಮಿ ನಗರಗಳಲ್ಲಿ ಬಸ್ ಸಂಚಾರ ವ್ಯವಸ್ಥೆ ಮಾಡಿದ್ದಾಗಿ ರಷ್ಯಾ ತಿಳಿಸಿದೆ. ರಷ್ಯಾ, ಉಕ್ರೇನ್ನಲ್ಲಿರುವ ನ್ಯುಕ್ಲಿಯರ್ ಪವರ್ ಪ್ಲಾಂಟ್ ವಶಕ್ಕೆ ಪಡೆದ ಬೆನ್ನಲ್ಲೇ ಭದ್ರತಾ ಮಂಡಳಿಯ 15 ರಾಷ್ಟ್ರಗಳು ಶುಕ್ರವಾರ ತುರ್ತು ಸಭೆ ನಡೆಸಿದವು. ಈ ಸಭೆಯಲ್ಲಿ ರಷ್ಯಾದ ಶಾಶ್ವತ ಪ್ರತಿನಿಧಿ, ‘ವಿದೇಶಿಯರ ಶಾಂತಿಯುತ ಸ್ಥಳಾಂತರ ಪ್ರಕ್ರಿಯೆಗೆ ರಷ್ಯಾ ಮಿಲಿಟರಿ ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದೆ.

ಆದರೆ ಉಕ್ರೇನ್ 3700 ಭಾರತೀಯರು, 2700 ವಿಯೆಟ್ನಾಂ, ಚೀನಾದ 121 ಜನರು ಸೇರಿ ಅನೇಕರನ್ನು ಖಾರ್ಕಿವ್ ಮತ್ತು ಸುಮಿನಲ್ಲಿ ಒತ್ತೆಯಾಗಿರಿಸಿಕೊಂಡಿದೆ’ ಎಂದು ಆರೋಪಿಸಿದ್ದಾರೆ.‘ರಷ್ಯಾದ ಬೆಲ್ಗೋರ್ಡ್ ಪ್ರದೇಶದಲ್ಲಿ ಖಾರ್ಕಿವ್ ಮತ್ತು ಸುನಿಯಿಂದ ಸ್ಥಳಾಂತರ ಪ್ರಕ್ರಿಯೆಗೆ 130 ಬಸ್ಸುಗಳು ಸಜ್ಜಾಗಿವೆ.

ಅವರನ್ನು ವಾಪಸ್ ಬೆಲ್ಗೋರ್ಡ್ಗೆ ಕರೆತಂದು ಅಲ್ಲಿಂದ ಸ್ವದೇಶಕ್ಕೆ ಕಳುಹಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ. ಆದರೆ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂಬ ಆರೋಪವನ್ನು ಭಾರತ ತಳ್ಳಿಹಾಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗಾಗಿ ಕೂದಲು ಕಸಿ ಮಾಡಿಸಿಕೊಂಡು ಸಾವಿಗೆ ಶಾರಣಾದ ಎಚ್ಚರ!