ಎಲ್ಲರ ಬಾಸ್ ಎಂದು ಹೇಳುವವರಿಗೆ ನಮ್ ಕಂಡ್ರೆ ಹೊಟ್ಟೆ ಉರಿ: ಅಮೆರಿಕಾಗೆ ರಾಜನಾಥ್ ಸಿಂಗ್ ಟಾಂಗ್

Krishnaveni K
ಸೋಮವಾರ, 11 ಆಗಸ್ಟ್ 2025 (10:06 IST)
ನವದೆಹಲಿ: ಎಲ್ಲರ ಬಾಸ್ ಎಂದು ಹೇಳಿಕೊಳ್ಳುವವರಿಗೆ ನಮ್ಮ ಏಳಿಗೆ ಕಂಡರೆ ಹೊಟ್ಟೆ ಉರಿಯಾಗುತ್ತಿದೆ. ಭಾರತದ ಆರ್ಥಿಕತೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಮೆರಿಕಾಗೆ ಟಾಂಗ್ ಕೊಟ್ಟಿದ್ದಾರೆ.

ಭಾರತದ ಆರ್ಥಿಕತೆ ಸತ್ತ ಆರ್ಥಿಕತೆ ಎಂದು ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಜರೆದಿದ್ದರು. ರಷ್ಯಾ ಜೊತೆಗೆ ಭಾರತದ ವ್ಯವಹಾರದಿಂದ ಹೊಟ್ಟೆ ಉರಿದುಕೊಂಡಿರುವ ಟ್ರಂಪ್ ಭಾರತದ ಸರಕುಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸಿ ಸೇಡು ತೀರಿಸಿಕೊಂಡಿದ್ದಾರೆ.

ಇದರ ವಿರುದ್ಧ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಮಧ್ಯಪ್ರದೇಶದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ರಾಜನಾಥ್ ಸಿಂಗ್ ಅಮೆರಿಕಾದ ಹೆಸರು ನೇರವಾಗಿ ಹೇಳದೇ ಖಡಕ್ ಕೌಂಟರ್ ಕೊಟ್ಟಿದ್ದಾರೆ.

ಕೆಲವು ರಾಷ್ಟ್ರಗಳು ಎಲ್ಲ ಬಾಸ್ ಎಂದು ಅವರನ್ನೇ ಕರೆದುಕೊಳ್ಳುತ್ತವೆ. ಆದರೆ ಇಂತಹ ರಾಷ್ಟ್ರಕ್ಕೆ ಭಾರತದ ಪ್ರಗತಿಯನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿಯೇ ಭಾರತದ ಉತ್ಪನ್ನಗಳಿಗೆ ವಿದೇಶಗಳಲ್ಲಿ ಬೆಲೆ ಹೆಚ್ಚಳವಾಗುವಂತೆ ಮಾಡಲಾಗುತ್ತಿದೆ. ಇಂತಹ ಪ್ರಯತ್ನಗಳೆಲ್ಲಾ ಪ್ರಯೋಜನವಾಗಲ್ಲ. ಭಾರತ ವಿಶ್ವದ ಪ್ರಬಲ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಹಿಂದೆ ವಿದೇಶದಿಂದ ಶಸ್ತ್ರಾಸ್ತ್ರ ಖರೀದಿಸುತ್ತಿದ್ದ ರಾಜನಾಥ್ ಸಿಂಗ್ ಈಗ ಸ್ವತಃ ಶಸ್ತ್ರಾಸ್ತ್ರ ತಯಾರು ಮಾಡುವಷ್ಟು  ಸಮರ್ಥವಾಗಿದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ನಾಯಕನಿದ್ದರೆ ಸಮುದಾಯಕ್ಕೆ ಬಲ, ಸಿದ್ದು ಪರ ಪುತ್ರ ಯತೀಂದ್ರ ಅಬ್ಬರದ ಭಾಷಣ

ಗೋವಾದಲ್ಲಿ ವಿಶ್ವದ ಅತಿ ಎತ್ತರದ ರಾಮನ ಪ್ರತಿಮೆ ಅನಾವರಣಗೊಳಿಸಿದ ಮೋದಿ

ಶಕ್ತಿ, ಗೃಹಲಕ್ಷ್ಮಿ ಯೋಜನೆಯಿಂದ ತಲಾ ಆದಾಯದಲ್ಲಿ ದೇಶದಲ್ಲಿಯೇ ರಾಜ್ಯ ಮೊದಲು: ಸಿದ್ದರಾಮಯ್ಯ

ಸಿದ್ದರಾಮಯ್ಯ ಸಂಕಲ್ಪನೂ ಈಡೇರುತ್ತೆ, ಡಿಕೆಶಿ ಸಿಎಂ ಆಗುತ್ತಾರೆ: ಜನಾರ್ದನ ರೆಡ್ಡಿ

ಇದಕ್ಕೆಲ್ಲ ಖರ್ಗೆ, ರಾಹುಲ್ ಗಾಂಧಿ ಪರಿಹಾರ ಹುಡುಕುತ್ತಾರೆ: ಕೆ ಹರಿಪ್ರಸಾದ್

ಮುಂದಿನ ಸುದ್ದಿ
Show comments