Publish Date: Sun, 25 Sep 2022 (07:11 IST)
Updated Date: Sun, 25 Sep 2022 (07:13 IST)
ಬೀಜಿಂಗ್ : ಚೀನಾದಲ್ಲಿ ಸೇನೆಯ ಕ್ಷಿಪ್ರ ಕ್ರಾಂತಿ ನಡೆಯುತ್ತಿದ್ದು, ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂಬ ವದಂತಿ ವ್ಯಾಪಕವಾಗಿ ಹರಿದಾಡುತ್ತಿದೆ.
ರಾಜಧಾನಿ ಬೀಜಿಂಗ್ ಈಗ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ನಿಯಂತ್ರಣದಲ್ಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವರದಿಗಳು ಹೇಳಿವೆ.
ಬೀಜಿಂಗ್ನಲ್ಲಿ ಸುಮಾರು 6 ಸಾವಿರ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ರೈಲು ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇತರೆ ಭಾಗದಿಂದ ನಗರದ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಸುಮಾರು 80 ಕಿಮೀ ಉದ್ದದ ಬೃಹತ್ ಸೇನಾ ತಂಡ ಬೀಜಿಂಗ್ ಕಡೆ ಸಾಗುತ್ತಿರುವುದು ವಿಡಿಯೋಗಳಲ್ಲಿ ಕಾಣಿಸಿದೆ. ಸೆ. 22ರಂದು ಪಿಎಲ್ಎ ಸೇನಾ ವಾಹನಗಳು ಬೀಜಿಂಗ್ ಕಡೆ ತೆರಳಿವೆ ಎಂದು ವರದಿಯಾಗಿದೆ.